ADVERTISEMENT

50 ವರ್ಷಗಳ ಹಿಂದೆ: ಶನಿವಾರ 13–11–1971

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2021, 19:31 IST
Last Updated 12 ನವೆಂಬರ್ 2021, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನಗರದ ಸುತ್ತಮುತ್ತ ಬೆಳೆಯಲು ಎಲೆಕ್ಟ್ರಾನಿಕ್ಸ್ ಕೈಗಾರಿಕೆಗಳಿಗೆ ಮಾತ್ರ ಅವಕಾಶ: ಧರ್ಮವೀರ

ಬೆಂಗಳೂರು, ನ. 12– ಬೆಂಗಳೂರು ಸುತ್ತ ಮುತ್ತ ಹೊಸ ಕೈಗಾರಿಕೆಗಳ ಸ್ಥಾಪನೆಗೆ ಸರ್ಕಾರ ಉತ್ತೇಜನ ನೀಡದು.

ಸರ್ಕಾರದ ಈ ಸಂಬಂಧದ ನೀತಿಯನ್ನು ಇಂದು ವರದಿಗಾರರಿಗೆ ವಿವರಿಸಿದ ರಾಜ್ಯ ಪಾಲ ಧರ್ಮವೀರ ಅವರು, ಎಲೆಕ್ಟ್ರಾನಿಕ್ಸ್ ಕೈಗಾರಿಕೆಗಳ ಬೆಳವಣಿಗೆಗೆ ಮಾತ್ರ ಅವಕಾಶ ಕೊಡಲಾಗುವುದು ಎಂದರು.

ADVERTISEMENT

‘ಬೆಂಗಳೂರು ಸುತ್ತಮುತ್ತ ಹೊಸ ಕೈಗಾರಿಕೆಗಳ ಸ್ಥಾಪನೆಗೆ ಅವಕಾಶ ಕೊಡಬಾರ ದೆಂದು ನಿರ್ಧರಿಸಲಾಗಿದೆ. ಇದು ಸರ್ಕಾರದ ನೀತಿ ಎಂದೇ ಭಾವಿಸಬಹುದು. ಆದರೆ, ಕಳೆದುಕೊಳ್ಳಬಾರದೆಂದು ಭಾವಿಸುವ ಕೈಗಾರಿಕೆಯೊಂದು ಬಂದರೆ ಅದಕ್ಕೆ ಒಪ್ಪಿಗೆ ನೀಡಬಹುದು’ ಎಂದರು.

ರಾಜ್ಯದಲ್ಲಿ ರೂ. 3 ಕೋಟಿ ಹೆಚ್ಚುವರಿ ತೆರಿಗೆ

ಬೆಂಗಳೂರು, ನ. 12– ಬಾಂಗ್ಲಾ ಸಮಸ್ಯೆಯಿಂದುಂಟಾಗಿರುವ ಆರ್ಥಿಕ ಸಮಸ್ಯೆಯನ್ನೆದುರಿಸಲು ಇತರ ರಾಜ್ಯಗಳಂತೆ ಮೈಸೂರು ರಾಜ್ಯ ಕೆಲವು ತೆರಿಗೆಗಳ ಮೇಲೆ ‘ಸರ್‌ ಚಾರ್ಚ್‌’ ವಿಧಿಸುವುದರ ಮೂಲಕ 2ರಿಂದ 3 ಕೋಟಿ ರೂ. ಹೆಚ್ಚು ಆದಾಯ ಪಡೆಯಲಿದೆ. ಮಾರಾಟ ತೆರಿಗೆ, ಸಿನಿಮಾ ಟಿಕೆಟ್‌ಗಳು, ಒಂದು ರೂ.ಗಿಂತ ಹೆಚ್ಚಿನ ಬಸ್ ಟಿಕೆಟ್‌ಗಳು, ಸ್ಟ್ಯಾಂಪ್ ಹಾಗೂ ರಿಜಿಸ್ಟ್ರೇಷನ್ ತೆರಿಗೆಗಳ ಮೇಲೆ ಸರ್ ಚಾರ್ಚ್ ವಿಧಿಸುವ ಸಲಹೆಗಳನ್ನು ರಾಜ್ಯ ಸರ್ಕಾರ ಈಗಾಗಲೇ ಕೇಂದ್ರ ಸರ್ಕಾರಕ್ಕೆ ಕಳುಹಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.