ಹರಿದ್ವಾರ, ಉಜ್ಜಯಿನಿ: ನೂಕುನುಗ್ಗಲಿಗೆ 64 ಜನ ಬಲಿ
ನವದೆಹಲಿ, ಜುಲೈ 15 (ಯುಎನ್‌ಐ, ಪಿಟಿಐ)– ಮಧ್ಯಪ್ರದೇಶದ ಉಜ್ಜಯಿನಿ ಹಾಗೂ ಉತ್ತರ ಪ್ರದೇಶದ ಹರಿದ್ವಾರಗಳಲ್ಲಿ ಪವಿತ್ರ ‘ಸೋಮಾವತಿ ಅಮಾವಾಸ್ಯೆ’ಯ ದಿನವಾದ ಇಂದು ದೇವರ ದರ್ಶನಕ್ಕಾಗಿ ಉಂಟಾದ ನೂಕು ನುಗ್ಗಲಿನಲ್ಲಿ ಕಾಲ್ತುಳಿತಕ್ಕೆ ಸಿಕ್ಕಿ ಒಟ್ಟು 64 ಜನ ಸತ್ತಿದ್ದಾರೆ.
ಮಧ್ಯ ಪ್ರದೇಶದ ಮುಖ್ಯಮಂತ್ರಿ ದಿಗ್ವಿಜಯ ಸಿಂಗ್ ಅವರು ಘಟನೆ ಕುರಿತು ಮಾಜಿಸ್ಟ್ರೇಟ್ ತನಿಖೆಗೆ ಆದೇಶ ನೀಡಿದ್ದಾರೆ. ತನಿಖೆಗೆ ಆದೇಶ ನೀಡಿದ್ದಾರೆ. ಸತ್ತವರ ಸಮೀಪದ ಬಂಧುಗಳಿಗೆ ಜಿಲ್ಲಾ ಆಡಳಿತ ತಲಾ 15 ಸಾವಿರ ರೂಪಾಯಿಗಳು ಹಾಗೂ ಗಾಯಗೊಂಡವರಿಗೆ ತಲಾ 3 ಸಾವಿರ ರೂಪಾಯಿ ಪರಿಹಾರವನ್ನು ಘೋಷಿಸಿದೆ.
ಉತ್ತರ ಪ್ರದೇಶ ಸರ್ಕಾರ ಘಟನೆಯ ಬಗ್ಗೆ ನ್ಯಾಯಾಂಗ ತನಿಖೆಗೆ ಆದೇಶ ನೀಡಿದೆ ಹಾಗೂ ಈ ಘಟನೆಯಲ್ಲಿ ಗಾಯಗೊಂಡಿರುವವರಿಗೆ ತಲಾ 1 ಲಕ್ಷ ರೂಪಾಯಿಗಳ ಪರಿಹಾರವನ್ನು ಘೋಷಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.