ADVERTISEMENT

ಪ್ರಜಾವಾಣಿಯಲ್ಲಿ 25 ವರ್ಷಗಳ ಹಿಂದೆ: ಸೋಮವಾರ – 4– 1997

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2022, 19:30 IST
Last Updated 6 ಏಪ್ರಿಲ್ 2022, 19:30 IST
   

ಬೆಳಗಾವಿ ಜಿಲ್ಲೆ ವಿಭಜನೆ ಸದ್ಯಕ್ಕಿಲ್ಲ: ಪಟೇಲ್‌ ಭರವಸೆ, ಚಳವಳಿ ಸ್ಥಗಿತ

ಬೆಳಗಾವಿ, ಏ. 6– ಬರುವ ಮಂಗಳವಾರ ಪ್ರಕಟವಾಗಲಿರುವ ಹೊಸ ಜಿಲ್ಲೆಗಳಲ್ಲಿ ಬೆಳಗಾವಿ ಜಿಲ್ಲೆಯಿಂದ ಯಾವುದೇ ಹೊಸ ಜಿಲ್ಲೆಯನ್ನು ಬೇರ್ಪಡಿಸುತ್ತಿಲ್ಲ ಎಂದು ಮುಖ್ಯಮಂತ್ರಿ ಜೆ.ಎಚ್‌.ಪಟೇಲ್‌ ಇಂದು ಭರವಸೆ ನೀಡುವುದರೊಡನೆ ಗೋಕಾಕ ಬಂದ್‌ ಅನ್ನು ಮಧ್ಯಾಹ್ನ ವಾಪಸು ತೆಗೆದುಕೊಳ್ಳಲಾಯಿತು. ತಹಶಿಲ್ದಾರ್‌ ಕಚೇರಿ ಎದುರು ಪ್ರಾರಂಭಗೊಂಡ ಅನಿರ್ದಿಷ್ಟ ನಿರಶನವನ್ನು ಶಾಸಕರು ಕೈಬಿಟ್ಟರು.

ಬೆಳಗಾವಿ ಜಿಲ್ಲೆಯನ್ನು ಒಡೆದು ಚಿಕ್ಕೋಡಿ ಅಥವಾ ಗೋಕಾಕ ಪಟ್ಟಣವನ್ನು ಕೇಂದ್ರವಾಗಿಸಿ ಹೊಸ ಜಿಲ್ಲೆ ರಚನೆ ಮಾಡಲಾಗುವುದು ಎಂದು ಮೊನ್ನೆ ರಾಜ್ಯ ಸಂಪುಟ ಸಭೆಯಲ್ಲಿ ತೀರ್ಮಾನವಾದ ಹಿಂದೆಯೇ ಗೋಕಾಕ ಪಟ್ಟಣದಲ್ಲಿ ಪ್ರತಿಭಟನೆಯ ಅಲೆ ಎದ್ದಿದ್ದು, ಗದ್ದಿಗೌಡರ ಸಮಿತಿಯ ಶಿಫಾರಸಿನಂತೆ ಗೋಕಾಕ ಪಟ್ಟಣವನ್ನೇ ಜಿಲ್ಲಾ ಕೇಂದ್ರವಾಗಿಸಬೇಕು ಎಂಬುದು ಪ್ರತಿಭಟನಕಾರರ ಬೇಡಿಕೆಯಾಗಿತ್ತು.

ADVERTISEMENT

ವಿವಿಧ ಅಕಾಡೆಮಿಗಳ 17 ಸದಸ್ಯರ ರಾಜೀನಾಮೆ

ಬೆಂಗಳೂರು, ಏ. 6– ‘ಧರ್ಮಕಾರಣ’ ಕಾದಂಬರಿಯನ್ನು ಮುಟ್ಟುಗೋಲು ಹಾಕಿಕೊಂಡಿರುವ ಸರ್ಕಾರದ ಕ್ರಮವನ್ನು ಪ್ರತಿಭಟಿಸಿ ವಿವಿಧ ಅಕಾಡೆಮಿಗಳ 17 ಮಂದಿ ಸದಸ್ಯರು ರಾಜೀನಾಮೆ ನೀಡಿದ್ದಾರೆ.

ಡಾ. ಪಿ.ವಿ.ನಾರಾಯಣ ಅವರ ವಿವಾದಾತ್ಮಕ ಕಾದಂಬರಿ ‘ಧರ್ಮಕಾರಣ’ ಕಾದಂಬರಿಯನ್ನು ಮುಟ್ಟುಗೋಲು ಹಾಕಿಕೊಂಡ ಸರ್ಕಾರದ ನಿರ್ಧಾರವನ್ನು ಪ್ರತಿಭಟಿಸಲು ರವೀಂದ್ರ ಕಲಾಕ್ಷೇತ್ರದ ಸಂಸ ಬಯಲು ರಂಗ ಮಂದಿರದಲ್ಲಿ ‘ಸಂವೇದನೆ’ ಇಂದು ಏರ್ಪಡಿಸಿದ್ದ
ಸಭೆಯಲ್ಲಿ ಅಕಾಡೆಮಿಗಳ ಸದಸ್ಯರ ರಾಜೀನಾಮೆ ವಿಷಯವನ್ನು
ಪ್ರಕಟಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.