ADVERTISEMENT

ಪ್ರಜಾವಾಣಿಯಲ್ಲಿ 25 ವರ್ಷಗಳ ಹಿಂದೆ: ಶನಿವಾರ 13–7–1996

​ಪ್ರಜಾವಾಣಿ ವಾರ್ತೆ
Published 12 ಜುಲೈ 2021, 19:30 IST
Last Updated 12 ಜುಲೈ 2021, 19:30 IST
   

ಬೀಸುವ ದೊಣ್ಣೆಯಿಂದ ರಾವ್ ಪಾರು

ನವದೆಹಲಿ, ಜುಲೈ 12 (ಪಿಟಿಐ): ಪಕ್ಷದಲ್ಲಿ ನಾಯಕತ್ವ ವಿವಾದವನ್ನು ಬಗೆಹರಿಸಿ, ಮುಂದಿನ ಕಾಂಗ್ರೆಸ್ ಅಧಿವೇಶನದವರೆಗೆ ರಾವ್ ಅವರನ್ನೇ ಪಕ್ಷಾಧ್ಯಕ್ಷರನ್ನಾಗಿ ಮುಂದುವರಿಸುವ ರಾಜಿ ಸೂತ್ರವನ್ನು ಸಿದ್ಧಗೊಳಿಸಲು ಇಂದು ಇಲ್ಲಿ ಸಭೆ ಸೇರಿದ್ದ ಕಾಂಗ್ರೆಸ್ ಕಾರ್ಯಕಾರಿಣಿ ನಿರ್ಧರಿಸಿದೆ.

ರಾಜಿಸೂತ್ರದ ಪ್ರಕಾರ, ರಾವ್‌ ವಿರುದ್ಧದ ವಂಚನೆ ಹಗರಣಕ್ಕೂ ರಾಜೀನಾಮೆ ಪ್ರಶ್ನೆಗೂ ತಳುಕು ಹಾಕುವಂತಿಲ್ಲ. ಜುಲೈ 16ರ
ಸಭೆಯಲ್ಲಿ ರಾವ್ ಅವರಿಗೆ ಪರ್ಯಾಯ ನಾಯಕನನ್ನು ಆಯ್ಕೆ ಮಾಡಿಕೊಳ್ಳುವ ಕೆಲಸವೂ ಆರಂಭವಾಗುತ್ತದೆ. ಮುಂದಿನ ಎಐಸಿಸಿ ಅಧಿವೇಶನ ಮುಂದಿನ ತಿಂಗಳಲ್ಲೇ ನಡೆಯಲಿದ್ದು, ಅಲ್ಲಿ ರಾವ್ ಉತ್ತರಾಧಿಕಾರಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಬಹುಶಃ ಎ.ಕೆ. ಆಂಟನಿ ಅವರು ಎಐಸಿಸಿ ಅಧ್ಯಕ್ಷ ಸ್ಥಾನವನ್ನು ತುಂಬುವ ನಿರೀಕ್ಷೆಯಿದೆ ಎಂದು ಗೊತ್ತಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.