ADVERTISEMENT

ಪ್ರಜಾವಾಣಿಯಲ್ಲಿ 25 ವರ್ಷಗಳ ಹಿಂದೆ: ಮಂಗಳವಾರ, 8–7–1997

​ಪ್ರಜಾವಾಣಿ ವಾರ್ತೆ
Published 7 ಜುಲೈ 2022, 19:30 IST
Last Updated 7 ಜುಲೈ 2022, 19:30 IST
   

l ಲಾಲೂ ಬಂಧಿಸಲು ಸಿಬಿಐ ಸಿದ್ಧ. ಆದರೆ...

ಪಟ್ನಾ, ಜುಲೈ 7 (ಪಿಟಿಐ) – ರಾಜ್ಯ ಸರ್ಕಾರ ಕೇಂದ್ರ ತನಿಖಾ ದಳ (ಸಿಬಿಐ) ದ ಸಿಬ್ಬಂದಿಗೆ ರಕ್ಷಣೆ ಒದಗಿದಸಿದರೆ ಹಾಗೂ ರಾಜ್ಯದಲ್ಲಿ ಕಾನೂನು ಮತ್ತು ಸುವವ್ಯಸ್ಥೆಯನ್ನು ಕಾಪಾಡಲು ಕ್ರಮ ಕೈಗೊಂಡರೆ ಮೇವು ಹಗರಣದಲ್ಲಿ ಆರೋಪಿಗಳಾಗಿರುವ ಬಿಹಾರದ ಮುಖ್ಯಮಂತ್ರಿ ಲಾಲೂ ಪ್ರಸಾದ್‌ ಯಾದವ್‌ ಸೇರಿದಂತೆ ಹಿರಿಯ ರಾಜಕಾರಣಿಗಳನ್ನು ಬಂಧಿಸಲು ಒಂದು ನಿಮಿಷವೂ ತಡ ಮಾಡುವುದಿಲ್ಲ ಎಂದು ಸಿಬಿಐ ಪಟ್ನಾ ಹೈಕೋರ್ಟ್‌ಗೆ ಇಂದು ತಿಳಿಸಿತು.

ಮೇವು ಹಗರಣದ ಸಂಬಂಧದಲ್ಲಿ ರಾಜ್ಯದ ಹಿರಿಯ ರಾಜಕೀಯ ಧುರೀಣರನ್ನು ಬಂಧಿಸಿದಲ್ಲಿ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ವ್ಯಾಪಕ ಸಮಸ್ಯೆ ಉದ್ಭವಿಸುವುದೇ ಮತ್ತು ಸಿಬಿಐನ ಇತರ ಎರಡು ಪ್ರಶ್ನೆಗಳಿಗೆ ಉತ್ತರಿಸಬೇಕೆಂದು ಹೈಕೋರ್ಟ್‌ ಸರ್ಕಾರಕ್ಕೆ ಸೂಚನೆ ನೀಡಿತು.

ADVERTISEMENT

l ಕೃಷ್ಣಾದಲ್ಲಿ ಅನಿರೀಕ್ಷಿತ ಮಹಾಪೂರ

ವಿಜಾಪುರ, ಜುಲೈ 7 – ಕಳೆದ ಒಂದು ವಾರದಿಂದ ಕೃಷ್ಣಾ ನದಿಯಲ್ಲಿ ಅನಿರೀಕ್ಷಿತ ಮಹಾಪೂರದಿಂದಾಗಿ ಆಲಮಟ್ಟಿ ಜಲಾಶಯ ಭರ್ತಿಯಾಗಿದ್ದು, ಸುತ್ತಮುತ್ತಲಿನ ಸುಮಾರು 50 ಗ್ರಾಮಗಳು ಹಿನ್ನೀರಿನ ಸೆಳೆತಕ್ಕೆ
ಸಿಕ್ಕಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.