ADVERTISEMENT

ಪ್ರಜಾವಾಣಿಯಲ್ಲಿ 50 ವರ್ಷಗಳ ಹಿಂದೆ: ಶನಿವಾರ, 23–07–1972

​ಪ್ರಜಾವಾಣಿ ವಾರ್ತೆ
Published 22 ಜುಲೈ 2022, 15:06 IST
Last Updated 22 ಜುಲೈ 2022, 15:06 IST
   

ಬ್ರಿಟನ್ನಿಗೆಎಚ್‌.ಎಂ.ಟಿ ತಾಂತ್ರಿಕ ಜ್ಞಾನ ರಫ್ತು

ನವದೆಹಲಿ, ಜುಲೈ 22– ವಿದೇಶಿ ವಿನಿಮಯ ಗಳಿಕೆಯಲ್ಲಿ ಭಾರತ ಹೊಸ ಮುನ್ನಡೆಯನ್ನು ಸಾಧಿಸಿದೆ. ಕೈಗಾರಿಕೆಗಳಲ್ಲಿ ಮುಂದುವರಿದಬ್ರಿಟನ್ನಿಗೆಯಂತ್ರೋಪಕರಣವೊಂದರ ತಾಂತ್ರಿಕ ಜ್ಞಾನವನ್ನು ಭಾರತ ಮೊತ್ತ ಮೊದಲ ಬಾರಿಗೆ ರಫ್ತು ಮಾಡುತ್ತಿದೆ.

ಪ್ರಪಂಚದಲ್ಲಿ ಖ್ಯಾತ ಯಂತ್ರೋಪಕರಣ ತಯಾರಿಕಾ ಸಂಸ್ಥೆಯಾದ ಮೆಸರ್ಸ್ ಎಕ್‌ ಮನ್ ಸಂಸ್ಥೆಗೆ ಹಿಂದೂಸ್ತಾನ್ ಮಷಿನ್ ಟೂಲ್ಸ್ ಸಂಸ್ಥೆಯು ‘ಮಿನಿ ಚಕರ್’
ಉತ್ಪಾದನೆಯ ತಾಂತ್ರಿಕ ಪರಿಜ್ಞಾನವನ್ನು ಹತ್ತು ವರ್ಷಗಳ ಒಪ್ಪಂದದಂತೆ ನೀಡುತ್ತದೆ.

ADVERTISEMENT

ಎಚ್‌.ಎಂ.ಟಿ.ಯು ಮಿನಿ ಚಕರ್ ಯಂತ್ರೋಪರಕರಣದ ಸ್ವರೂಪ ಹಾಗೂ ಬ್ಲೂಪ್ರಿಂಟ್ ಅನ್ನು ಒದಗಿಸುವುದು. ಬ್ರಿಟಿಷ್ ಸಂಸ್ಥೆಯು ಇದಕ್ಕೆ ಸಾಕಷ್ಟು ಪ್ರಮಾಣದ ಗೌರವ ಧನವನ್ನು ನೀಡುವುದು. ಭಾರತದಲ್ಲಿ ರೂಪಿಸಲಾಗಿರುವ ಮಿನಿಚಕರ್ ಇತರ ಐರೋಪ್ಯ ಮಾರುಕಟ್ಟೆಗಳ ಗಮನವನ್ನೂ ಸೆಳೆದಿದೆ.

ಕಾವೇರಿ ಜಲವಿವಾದ: ಸುಪ್ರೀಂ ಕೋರ್ಟಿನಿಂದ ಹಿಂತೆಗೆದುಕೊಳ್ಳಲು ತಮಿಳುನಾಡು ಅರ್ಜಿ

ನವದೆಹಲಿ, ಜುಲೈ 22– ಕಾವೇರಿ ಜಲವಿವಾದ ಪ್ರಕರಣವನ್ನು ಹಿಂದಕ್ಕೆ ತೆಗೆದುಕೊಳ್ಳಲು ಅನುಮತಿಯನ್ನು ಕೇಳಿ ತಮಿಳುನಾಡು ಸರ್ಕಾರ ಇಂದು ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿತು.

ಸಂಬಂಧಿಸಿದ ರಾಜ್ಯಗಳ ನಡುವೆ ಆದಷ್ಟು ಶೀಘ್ರವಾಗಿ ಪರಿಹಾರ ಮೂಡಲು ಅನುಕೂಲವಾಗುವಂತೆ ಈ ಕ್ರಮವನ್ನು ಕೈಗೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.