
ನವದೆಹಲಿ, ಡಿ. 9 (ಪಿಟಿಐ, ಯುಎನ್‌ಐ)– ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣದ ಬಗ್ಗೆ ನೀಡಿದ ವಿವಾದಾತ್ಮಕ ಹೇಳಿಕೆಗಳಿಂದ ವಿರೋಧ ಪಕ್ಷಗಳಲ್ಲಿ ತೀವ್ರ ವಿರೋಧದ ಅಲೆಯನ್ನೇ ಎಬ್ಬಿಸಿರುವ ಪ್ರಧಾನಿ ವಾಜಪೇಯಿ ಅವರು, ಸಂಸತ್ತಿನಲ್ಲಿ ಈ ಕುರಿತು ತಮ್ಮ ನಿಲುವು ಸ್ಪಷ್ಟಪಡಿಸುವುದಾಗಿ ಹೇಳಿದ್ದಾರೆ.
‘ಬುಧವಾರ ಮತ್ತು ಗುರುವಾರ ತಾವು ನೀಡಿದ ಹೇಳಿಕೆಗಳಿಂದ ಉಂಟಾಗಿರುವ ಎಲ್ಲಾ ಪ್ರಶ್ನೆಗಳಿಗೂ ಸರ್ಕಾರ ಸಂಸತ್ತಿನಲ್ಲಿ ಚರ್ಚೆ ನಡೆಸಲು ಸಿದ್ಧ’ ಎಂದು ಅವರು ಸ್ಪಷ್ಟಪಡಿಸಿದರು.
ಬಿಗಿ ಭದ್ರತೆಯಲ್ಲಿ ಶೋಭಾಯಾತ್ರೆ
ಚಿಕ್ಕಮಗಳೂರು, ಡಿ. 9– ಬಾಬಾ ಬುಡನ್‌ಗಿರಿಗೆ ಕೇಂದ್ರೀಕೃತವಾಗಿದ್ದ ದುಗುಡದ ಛಾಯೆ ಇಂದು ನಗರವನ್ನು ಆಚರಿಸಿತ್ತು. ಆದರೆ, ಬಿಗಿ ಭದ್ರತೆಯಲ್ಲಿ ಯಾವುದೇ ಅಹಿತಕರ ಘಟನೆಗೂ ಆಸ್ಪದ ಇಲ್ಲದೆ ಶೋಭಾಯಾತ್ರೆ ನಡೆಯಿತು. ದತ್ತ ಜಯಂತಿ ಅಂಗವಾಗಿ ಬಜರಂಗದಳ ಹಮ್ಮಿಕೊಂಡಿದ್ದ ಪಾಂಚಜನ್ಯ ರಥಯಾತ್ರೆಯ ಶೋಭಾ ಯಾತ್ರೆ ಮುಕ್ತಾಗೊಂಡು ಬಾಬಾ ಬುಡನ್‌ಗಿರಿಯತ್ತ ಹೊರಟು ನಿಂತಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.