
ಪ್ರಜಾವಾಣಿ ವಿಶೇಷ
75 ವರ್ಷಗಳ ಹಿಂದೆ ಈ ದಿನ
ಬೆಂಗಳೂರು, ಜ. 12– ಇಂದು ನಡೆದ ಕಾರ್ಪೊರೇಷನ್ ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಉಮೇದುದಾರರಾದ ಆರ್. ಅನಂತರಾಮನ್‌ರವರು ಮೇಯರ್ ಆಗಿ ಬಹುಮತದಿಂದ ಚುನಾಯಿತರಾದರು.
ಡೆಪ್ಯುಟಿ ಮೇಯರ್ ಆಗಿ ಕಾಂಗ್ರೆಸ್ ಉಮೇದುದಾರರಾದ ಜಯಶೀಲನ್ ಬಹುಮತದಿಂದ ಆರಿಸಲ್ಪಟ್ಟರು.
ಮೇಯರ್ ಹಾಗೂ ಡೆಪ್ಯುಟಿ ಮೇಯರ್ ಸ್ಥಾನಗಳಿಗೆ ಸ್ಪರ್ಧಿಸಿದ್ದ ಸಂಯುಕ್ತ ಪೌರ ಪಕ್ಷದ ಉಮೇದುದಾರರಾದ ಕೆ.ಎಂ. ನಾಗಣ್ಣ ಮತ್ತು ಡಿ.ಎನ್. ಹೊಸಾಳಿಯವರು ಸೋತರು.
ಸಭೆ 4 ಗಂಟೆಗೆ ಮೇಯೊಹಾಲಿನಲ್ಲಿ ಆರಂಭವಾಯಿತು. ಆರಂಭದಲ್ಲಿ ಸಭೆಯ ಅಧ್ಯಕ್ಷತೆವಹಿಸಲು ಎಸ್.ಕೆ. ವೆಂಕಟರಂಗಯ್ಯಂಗಾರ್ ಅವರನ್ನು ಸರ್ವಾನುಮತದಿಂದ ಚುನಾಯಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.