75 ವರ್ಷಗಳ ಹಿಂದೆ
ಹೈದರಾಬಾದ್, ಜುಲೈ 26– ಭಾರತ ಸರ್ಕಾರದ ಸಂಪರ್ಕ ಶಾಖಾ ಸಚಿವ ಶ್ರೀ ರಫಿ ಅಹಮದ್ ಕಿದ್ವಾಯಿ ಅವರು ಇಂದು ಬೆಳಿಗ್ಗೆ ಹೈದರಾಬಾದ್ ಸಂಸ್ಥಾನ ಕಾಂಗ್ರೆಸ್ಸಿನ ಕೇಂದ್ರ ಕಚೇರಿಗೆ ಭೇಟಿ ನೀಡಿದರು.
ಸ್ಥಳೀಯ ಕಾಂಗ್ರೆಸ್ ನಾಯಕರೊಂದಿಗೆ 40 ನಿಮಿಷ ಮಾತನಾಡಿದ ಅವರು, ಕಾಂಗ್ರೆಸ್ ಸಮಿತಿಗಳನ್ನು ಕ್ಷೇತ್ರಗಳ ಆಧಾರದ ಮೇಲೆ ಪುನರ್ ವಿಂಗಡಿಸುವುದು ಮತ್ತು ಭಾರತದ ಅಂಚೆ ವ್ಯವಸ್ಥೆಯೊಂದಿಗೆ ಸಂಘಟಿಸಿದುದರ ಫಲವಾಗಿ ಸಂಸ್ಥಾನದ ಅಂಚೆ ವ್ಯವಸ್ಥೆಯ ಮುಂದಿರುವ ಸಮಸ್ಯೆಗಳ ಕುರಿತು ಚರ್ಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.