
ಪ್ರಜಾವಾಣಿ ವಿಶೇಷ75 ವರ್ಷಗಳ ಹಿಂದೆ
ಮಾಸ್ಕೋ, ಜ. 16– ಚಂದ್ರ ಮತ್ತುಇತರ ಗ್ರಹಗಳ ಲೋಕಕ್ಕೆ ಭೂಮಂಡಲದಿಂದ ಪ್ರವಾಸ ಮಾಡುವ ಪ್ರಶ್ನೆ ಈಗ ಭಾವನಾಲೋಕದ ಊಹೆಯಾಗಿ ಉಳಿದಿಲ್ಲ ಎಂದು ಸೋವಿಯತ್ ವಿಜ್ಞಾನಿ ಲೆಖ್ಪ ಹೇಳಿದ್ದಾರೆ.
ಗ್ರಹಗಳ ಮಧ್ಯಂತರದ ಸ್ಥಳವನ್ನು ಪ್ರವೇಶಿಸುವ ಶಕ್ತಿ ಮನುಷ್ಯನಿಗೆ ದಕ್ಕುವ
ಕಾಲ ದೂರವಿಲ್ಲ ಎಂಬುದಾಗಿ ಮಾಸ್ಕೋ ಕೊಮ್ಸೊವೇಲ್ ಎಂಬ ಯುವಕರ ಪತ್ರಿಕೆಯಲ್ಲಿ ಬರೆದಿದ್ದಾರೆ.
ವಿಶ್ವಯಾನದ ನಾನಾ ಮಾರ್ಗಗಳನ್ನು ಪರಮಾಣು ಶಕ್ತಿ ತೋರಿಸಿದೆ. ಪರಮಾಣು ಶಕ್ತಿಯ ಯಾನಗಳು ಎಲ್ಲೂ ನಿಲ್ಲದೆ ಸೌರವ್ಯೂಹದ ಯಾವ ಗ್ರಹದಿಂದ ಯಾವ ಗ್ರಹಕ್ಕೆ ಬೇಕಾದರೂ ಹಾರಬಹುದು ಎಂಬುದಾಗಿ ವಿವರಿಸಿದ್ದಾರೆ.