
ರಾಯಚೂರು, ಡಿ. 8– ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ಪ್ರಧಾನ ಬೆಳೆ ಸೋನಾ ಮಸೂರಿ (ಬಿಪಿಟಿ–5204) ಭತ್ತಕ್ಕೆ ‘ಎ’ ದರ್ಜೆ ಗುಣಮಟ್ಟದ ಸ್ಥಾನ ನೀಡಿ ಸೂಕ್ತ ಬೆಂಬಲ ಬೆಲೆ ನಿಗದಿಮಾಡಬೇಕೆಂಬ ಕರ್ನಾಟಕ ಸರ್ಕಾರದ ನಿಯೋಗವೊಂದು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದ ಮನವಿಯನ್ನು ಪುರಸ್ಕರಿಸಿ, ಭತ್ತದ ವಿವಿಧ ನಮೂನೆ ಸಂಗ್ರಹಿಸಲು ತಾಂತ್ರಿಕ ಅಧಿಕಾರಿಗಳು ಆಗಮಿಸಿದ್ದಾರೆ.
ಭಾರತ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ತಾಂತ್ರಿಕ ಅಧಿಕಾರಿ ಎಸ್.ಕೆ. ಕುಲಕರ್ಣಿ ಅವರು ಜಿಲ್ಲೆಗೆ ಆಗಮಿಸಿದ್ದು ಸಿಂಧನೂರು, ಮಾನ್ವಿ, ರಾಯಚೂರು, ಕೊಪ್ಪಳ ಜಿಲ್ಲೆಯ ಕಾರಟಗಿ, ಗಂಗಾವತಿ, ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿ ಬೆಳೆಯುತ್ತಿರುವ ಸೋನಾ ಮಸೂರಿ ಭತ್ತದ ನಮೂನೆ ಸಂಗ್ರಹಿಸಿದ್ದಾರೆ.
ರನ್‌ವೇಯಲ್ಲಿ ಅಪಘಾತ: ಪ್ರಯಾಣಿಕರು ಪಾರು
ಮಂಗಳೂರು, ಡಿ. 8– ಮುಂಬೈನಿಂದ ಮಂಗಳೂರಿಗೆ ಬಂದ ಜೆಟ್ ಏರ್‌ವೇಸ್ ಸಂಸ್ಥೆಗೆ ಸೇರಿದ ವಿಮಾನ, ಬಜ್ಪೆ ನಿಲ್ದಾಣದಲ್ಲಿ ಭೂಸ್ಪರ್ಶ ಮಾಡಿದ ಸ್ವಲ್ಪ ಹೊತ್ತಿನಲ್ಲಿ ರನ್‌ವೇ ಮಧ್ಯದಲ್ಲಿದ್ದಾಗ ಮುಂದಿನ ಚಕ್ರ ಒಡೆದು ಅಪಘಾತಕ್ಕೀಡಾದರೂ ಅದರಲ್ಲಿದ್ದ 129 ಪ್ರಯಾಣಿಕರು ಮತ್ತು 6 ಮಂದಿ ಚಾಲಕ ಸಿಬ್ಬಂದಿ ಆಶ್ಚರ್ಯಕರವಾಗಿ ಪಾರಾದ ಘಟನೆ ಇಂದು ಸಂಭವಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.