ವಿದ್ಯಾರ್ಥಿಗಳ ಸಭೆ, ಮೆರವಣಿಗೆಗೆ ನಿಷೇಧ
ಗ್ವಾಲಿಯರ್, ಸೆಪ್ಟೆಂಬರ್ 16– ವಿದ್ಯಾರ್ಥಿಗಳ ಸಭೆ ಹಾಗೂ ಮೆರವಣಿಗೆಗೆ ನಿಷೇಧ ಹೇರಿರುವ ಸರ್ಕಾರದ ನಡೆ ಖಂಡಿಸಿ, ನಗರದಲ್ಲಿ ಇಂದು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಇಲ್ಲಿನ ನ್ಯಾಯ ಚೌಕದ ಬಳಿ ಜಮಾವಣೆಗೊಂಡು ಘೋಷಣೆ ಕೂಗಿದ ವಿದ್ಯಾರ್ಥಿಗಳ ಗುಂಪು ಚದುರಿಸಲು ಪೊಲೀಸರು ಟಿಯರ್ ಗ್ಯಾಸ್ ಪ್ರಯೋಗಿಸಿದರು.
ವಿದ್ಯಾರ್ಥಿಗಳು ಸ್ವಯಂಪ್ರೇರಿತ ವಾಗಿ ಪ್ರತ್ಯೇಕ ಗುಂಪುಗಳಾಗಿ ವಿಭಜನೆಗೊಂಡು, ವಿವಿಧ ಸ್ಥಳಗಳಲ್ಲಿ ಪ್ರತಿಭಟನೆ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.