
ನವದೆಹಲಿ, ಡಿ. 23– ಇದುವರೆಗೆ ಕ್ರಿಕೆಟ್ ಅನ್ನು ಅಂಟಿಕೊಂಡಿದ್ದ ಮೋಸದಾಟ ಇಲ್ಲಿ ನಡೆಯುತ್ತಿರುವ ಏಷ್ಯಾ ಕಪ್ ಟೆನಿಸ್ ಟೂರ್ನಿಗೂ ಅಂಟಿಕೊಂಡು ಟೆನಿಸ್ ಜಗತ್ತಿನಲ್ಲಿ ಅಲ್ಲೋಲ–ಕಲ್ಲೋಲಕ್ಕೆ ಕಾರಣವಾಯಿತು.
ಏಷ್ಯನ್ ಟೆನಿಸ್ ಟೂರ್ನಿಯ ಅಂತಿಮ ರೌಂಡ್ ರಾಬಿನ್ ಲೀಗ್ ಪಂದ್ಯದಲ್ಲಿ ಕೊರಿಯ ತಂಡವು ತನ್ನ ಎದುರಾಳಿ ಥಾಯ್‌ಲೆಂಡ್‌ಗೆ ಪಂದ್ಯ ‘ಬಿಟ್ಟುಕೊಟ್ಟು’ ಭಾರತ ತಂಡವು ಫೈನಲ್ ಪ್ರವೇಶಿಸದಂತೆ ತಡೆಯಲು ಯಶಸ್ವಿಯಾಯಿತು.
147 ಸ್ಥಳೀಯ ಸಂಸ್ಥೆಗಳಿಗೆ ಜ. 28ರಂದು ಚುನಾವಣೆ
ಬೆಂಗಳೂರು, ಡಿ. 23– ರಾಜ್ಯದ ನಾಲ್ಕು ಮಹಾನಗರ ಪಾಲಿಕೆಗಳು ಸೇರಿದಂತೆ ಒಟ್ಟು 147 ಸ್ಥಳೀಯ ಸಂಸ್ಥೆಗಳಿಗೆ ನಡೆಯಲಿರುವ ಮೊದಲ ಹಂತದ ಚುನಾವಣೆಗೆ ಜನವರಿ 28ರಂದು ಮತದಾನ ನಡೆಯಲಿದೆ ಎಂದು ರಾಜ್ಯ ಚುನಾವಣಾ ಆಯೋಗ ಪ್ರಕಟಿಸಿದೆ.
ಜನವರಿ 8ರಂದು ಅಧಿಸೂಚನೆ ಹೊರಡಿಸಲಾಗುತ್ತದೆ ಎಂದು ರಾಜ್ಯ ಚುನಾವಣಾ ಆಯೋಗ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.