ADVERTISEMENT

75 ವರ್ಷಗಳ ಹಿಂದೆ: ವಿಶ್ವಸಂಸ್ಥೆಯ ಸಹಾಯ ಕೋರಿ ಟಿಬೆಟ್ ಮೊರೆ

ಭಾನುವಾರ, 12 ನವೆಂಬರ್ 1950

ಪ್ರಜಾವಾಣಿ ವಿಶೇಷ
Published 11 ನವೆಂಬರ್ 2025, 19:30 IST
Last Updated 11 ನವೆಂಬರ್ 2025, 19:30 IST
   

ದೆಹಲಿ, ನ. 11 – ಚೀನಾ ವಿಮೋಚನಾ ಪಡೆಗಳು ಟಿಬೆಟ್ ರಾಷ್ಟ್ರವನ್ನು ಆಕ್ರಮಣ ಮಾಡಿರುವುದರಿಂದ ಉಂಟಾಗಿರುವ ಇಂದಿನ ಪರಿಸ್ಥಿತಿಯಲ್ಲಿ ಮಧ್ಯೆ ಪ್ರವೇಶಿಸಬೇಕೆಂದೂ ಹಾಗೂ ಸಹಾಯ ಒದಗಿಸಬೇಕೆಂದೂ ವಿಶ್ವಸಂಸ್ಥೆಗೆ ದಲಾಯಿ ಲಾಮಾ ಅವರ ಟಿಬೆಟ್ ಸರ್ಕಾರ ಮನವಿ ಕಳುಹಿಸಿದೆ ಎಂಬುದಾಗಿ ಅಧಿಕೃತವಾಗಿ ತಿಳಿದುಬಂದಿದೆ.

ನವೆಂಬರ್ 8ರಂದು ಟಿಬೆಟ್ ಸರ್ಕಾರ ವಿಶ್ವಸಂಸ್ಥೆಗೆ ನೇರವಾಗಿ ಮನವಿ ಕಳುಹಿಸಿದೆ. ಟಿಬೆಟ್ಟಿನ ಈ ಆಪಾದನೆಯನ್ನು ವಿಶ್ವಸಂಸ್ಥೆಯ ಘೋಷಣೆ ರೀತ್ಯ ಭದ್ರತಾ ಸಮಿತಿ ಗಣನೆಗೆ ತೆಗೆದುಕೊಳ್ಳಲೇಬೇಕಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT