ತುಮಕೂರು, ಅ. 16– ಇಲ್ಲಿಗೆ ಸಮೀಪದ ಊರುಕೆರೆ ಎಂಬಲ್ಲಿ ಇಂದು ರಾತ್ರಿ ಸಂಭವಿಸಿದ ರಸ್ತೆ ಅಪಘಾತವೊಂದರಲ್ಲಿ ಮೂರು ಮಂದಿ ಮೃತಪಟ್ಟಿದ್ದಾರೆ ಹಾಗೂ ಇತರ ಮೂವರು ತೀವ್ರವಾಗಿ ಗಾಯಗೊಂಡಿದ್ದಾರೆ.
ಮೃತಪಟ್ಟವರನ್ನು ಆಟೊ ಚಾಲಕ ಮಂಜುನಾಥ (21), ರವಿ (21) ಮತ್ತು ಕೃಷ್ಣಕುಮಾರ್ (22) ಎಂದು ಗುರುತಿಸಲಾಗಿದೆ. ನರಸಾಪುರದ ಎನ್. ರಂಗಸ್ವಾಮಿ (22), ಕಳಸೇಗೌಡನಪಾಳ್ಯದ ಶಿಕ್ಷಕ ಬಸವರಾಜ್ ಮತ್ತು ಊರುಕೆರೆಯ ಪ್ರಕಾಶ್ (22) ತೀವ್ರವಾಗಿ ಗಾಯಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.