ಬೆಂಗಳೂರು, ಆಗಸ್ಟ್ 7– ‘ವರನಟ ಡಾ. ರಾಜ್ ಮತ್ತು ಇತರ ಮೂವರ ಅಪಹರಣ ಪ್ರಕರಣಕ್ಕೆ ಮುಕ್ತಾಯ ಹೇಳಲು ರಾಜ್ಯ ಸರ್ಕಾರ ಹಲವು ನಿರ್ಧಾರಗಳನ್ನು ಪ್ರಕಟಿಸಿದರೂ ಅದಕ್ಕೆ ಪ್ರತಿಯಾಗಿ ವೀರಪ್ಪನ್‌ನ ಮೌನ ಅಸಹನೀಯವಾಗಿದೆ’ ಎಂದು ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಇಂದು ಇಲ್ಲಿ ಬೇಸರ ವ್ಯಕ್ತಪಡಿಸಿದರು.
ವರದಿಗಾರರ ಜೊತೆಗೆ ಮಾತನಾಡಿದ ಅವರು, ವೀರಪ್ಪನ್ ಕಡೆಯಿಂದ ಇದುವರೆಗೆ ಯಾವುದೇ ಉತ್ತರ ಬಂದಿಲ್ಲ ಎಂದರು.
ಕಾರು–ಬಸ್ ಡಿಕ್ಕಿ: ಪಟೇಲ್ ಬಂಧುಗಳು ಸೇರಿ 4 ಸಾವು
ಚಿತ್ರದುರ್ಗ, ಆಗಸ್ಟ್ 7– ಗೌರಮ್ಮನ ಗೇಟ್ ಬಳಿ ಹೆದ್ದಾರಿಯಲ್ಲಿ ಕಾರು ಮತ್ತು ಖಾಸಗಿ ಬಸ್ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಕಾರಿನ ಚಾಲಕ ಮತ್ತು ಕಾರಿನಲ್ಲಿದ್ದ ಇತರ ಮೂವರು ಮೃತರಾದರು.
ಮೃತರಾದ ಸಾವಿತ್ರಮ್ಮ ವಾಮದೇವಪ್ಪ (58) ಹಾಗೂ ಉಮಾ ಬಸವರಾಜ್ (56) ರಾಜ್ಯದ ಮಾಜಿ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಅವರ ತಂಗಿಯರು; ಮೃತಳಾದ ಬಾಲಕಿ ಶಕ್ತಿ, ಜೆ.ಎಚ್. ಪಟೇಲರ ಮಗ ಮಹಿಮಾ ಪಟೇಲ್ ಅವರ ಮಗಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.