ADVERTISEMENT

50 ವರ್ಷಗಳ ಹಿಂದೆ: ಭಾನುವಾರ, ಆಗಸ್ಟ್‌ 30, 1970

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2020, 16:06 IST
Last Updated 29 ಆಗಸ್ಟ್ 2020, 16:06 IST
   

ಪೇಟೆಂಟ್ಸ್‌ಮಸೂದೆಗೆಲೋಕಸಭೆಯ ಸರ್ವಾನುಮತದ ಒಪ್ಪಿಗೆ

ನವದೆಹಲಿ,ಆ.29– 1970ರಪೇಟೆಂಟ್ಸ್‌ ಮಸೂದೆಯು ಕೆಲವು ತಿದ್ದುಪಡಿಗಳೊಡನೆ ಇಂದು ಲೋಕಸಭೆಯಲ್ಲಿ ಸರ್ವಾನುಮತದಿಂದ ಅಂಗೀಕಾರವಾಯಿತು.

ಈ ಮಸೂದೆ ಮೇಲೆ ನಾಲ್ಕು ಗಂಟೆಗಳ ಕಾಲ ನಡೆದ ಚರ್ಚೆಗೆ ಉತ್ತರ ಕೊಟ್ಟ ಕೇಂದ್ರ ಕೈಗಾರಿಕಾಭಿವೃದ್ಧಿ ಸಚಿವ ಶ್ರೀ. ದಿನೇಶ್‌ ಸಿಂಗ್‌ ಅವರುಪೇಟೆಂಟ್ಸ್‌ ಪದ್ದತಿ ರದ್ದುಪಡಿಸಬೇಕು ಎಂಬ ಸಲಹೆಯನ್ನು ತಳ್ಳಿ ಹಾಕಿದರು.

ADVERTISEMENT

ಬಳ್ಳಾರಿ ಬಳಿ ಕಬ್ಬಿಣದ ಸಣ್ಣ ಉಂಡೆಗಳನ್ನು ತಯಾರಿಸುವ ಕೈಗಾರಿಕೆ ಸ್ಥಾಪನೆ

ಬೆಂಗಳೂರು, ಆ.29– ರಫ್ತಿಗೆ ಅನುಕೂಲವಾಗುವಂತೆ ಕಬ್ಬಿಣದ ಸಣ್ಣ ಉಂಡೆಗಳನ್ನು ತಯಾರಿಸುವ 25 ಕೋಟಿ ರೂ. ವೆಚ್ಚದ ಕೈಗಾರಿಕಯೊಂದನ್ನು ಬಳ್ಳಾರಿಯ ಪ್ರದೇಶದಲ್ಲಿ ಸ್ಥಾಪಿಸಲಾಗುವುದು.

ಈ ಕೈಗಾರಿಕೆ ಸ್ಥಾಪಿಸಲು ಮೂರು ಅರ್ಜಿಗಳು ರಾಜ್ಯ ಸರ್ಕಾರದ ಮುಂದಿದ್ದು, ಅವುಗಳಲ್ಲಿ ಒಂದನ್ನು ಆರಿಸಲಾಗುವುದು ಎಂದು ಕೈಗಾರಿಕೆಗಳ ಉಪಸಚಿವ ಶ್ರೀ.ಎ.ಪಿ. ಅಪ್ಪಣ್ಣನವರು ಇಂದು ‘ಪ್ರಜಾವಾಣಿ’ಗೆ ತಿಳಿಸಿದರು. ಕಬ್ಬಿಣದ ಅದಿರನ್ನು ಆಮದು ಮಾಡಿಕೊಳ್ಳುತ್ತಿರುವ ಕೆಲ ದೇಶಗಳು ಅದಿರು ತಮಗೆ ಗಟ್ಟಿ ರೂಪದಲ್ಲಿ ಬೇಕೆಂದು ಕೇಳುತ್ತಿರುವುದರಿಂದ, ಪುಡಿ ಅದಿರು ವ್ಯರ್ಥವಾಗುತ್ತಿದೆ. ಪುಡಿ ಮತ್ತು ಗಟ್ಟಿ ಅದಿರು, ಎರಡನ್ನೂ ಉಪಯೋಗಿಸಿ ಕಬ್ಬಿಣದ ಸಣ್ಣ ಉಂಡೆಗಳನ್ನು ತಯಾರಿಸಿದರೆ, ಪುಡಿಯ ಉಪಯೋಗವೂ ಆಗಿ ಅದಿರಿನ ಗಿರಾಕಿಗಳ ಅಗತ್ಯವನ್ನೂ ಪೂರೈಸಿ ತಯಾರಿಸಿದಂತಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.