
ಪ್ರಜಾವಾಣಿ ವಾರ್ತೆಅಹಮದಾಬಾದ್, ಅ. 29– ‘ಅಸ್ಪೃಶ್ಯತೆಯನ್ನು ಕಿತ್ತೊಗೆಯದ ಹೊರತು ಭಾರತವು ಸ್ವತಂತ್ರವಾಗಿ ಬಾಳಲಾರದೆಂಬುದಾಗಿ ಎಚ್ಚರವೀಯಲು ಪೂಜ್ಯ ಮಹಾತ್ಮ ಗಾಂಧಿಯವರು ಸಾಬರಮತಿ ಆಶ್ರಮವನ್ನು ಹರಿಜನ ಆಶ್ರಮವನ್ನಾಗಿ ಪರಿವರ್ತಿಸಿದರು’ ಎಂದು ಉಪ ಮಹಾ ಪ್ರಧಾನಿ ಸರ್ದಾರ್ ಪಟೇಲರು ತಿಳಿಸಿದರು. ಗುಜರಾತ್ ವಿದ್ಯಾಪೀಠದ ಪದವೀದಾನ ಸಮಾರಂಭದಲ್ಲಿ ಮಾತನಾಡುತ್ತಾ, ಸ್ವತಂತ್ರ ಭಾರತದಲ್ಲಿ ಅಸ್ಪೃಶ್ಯತೆಯ ನಿರ್ಮೂಲನ ಮತ್ತು ವಿದ್ಯಾಭ್ಯಾಸದ ಕ್ರಾಂತಿಕಾರಕ ಬದಲಾವಣೆಯ ಅಗತ್ಯವನ್ನು ಒತ್ತಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.