
ನೇಕಾರರಿಗೆ ರಿಯಾಯ್ತಿ ವಿದ್ಯುತ್: ಭರವಸೆ
ಬೆಂಗಳೂರು, ಡಿ. 31– ವಿದ್ಯುತ್ ದರ ಏರಿಕೆಯಿಂದ ವಿದ್ಯುತ್ ಮಗ್ಗಗಳಿಗೆ ತೊಂದರೆಯಾಗುವ ಹಿನ್ನೆಲೆಯಲ್ಲಿ ಆ ಕ್ಷೇತ್ರಕ್ಕೆ ವಿದ್ಯುತ್ ದರ ಕಡಿಮೆ ಮಾಡುವುದರ ಬಗ್ಗೆ ತಾವು ಪ್ರಯತ್ನಿಸುವುದಾಗಿ ಜವಳಿ ಹಾಗೂ ರೇಷ್ಮೆ ಸಚಿವ ಎಂ. ಮಹದೇವ ಇಂದು ಇಲ್ಲಿ ಭರವಸೆ ನೀಡಿದರು.
ಕೇಂದ್ರ ಸರ್ಕಾರದ ನೂತನ ಜವಳಿ ನೀತಿಗೆ ಪೂರಕವಾಗಿ ರಾಜ್ಯ ಸರ್ಕಾರವೂ ತನ್ನದೇ ಆದ ಜವಳಿ ನೀತಿ ರೂಪಿಸುತ್ತದೆ ಎಂದು ಸರ್ಕಾರದ ಶ್ರೀಕೃಷ್ಣರಾಜೇಂದ್ರ ಸಿಲ್ವರ್ ಜ್ಯೂಬಿಲಿ ತಾಂತ್ರಿಕ ಸಂಸ್ಥೆಯ ವಜ್ರಮಹೋತ್ಸವ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡುತ್ತಾ ಸಚಿವರು ತಿಳಿಸಿದರು.
ಸರ್ಕಾರಿ ಖಜಾನೆ ಹಣ ಸಮೇತ ಅಧಿಕಾರಿ ಪರಾರಿ
ಚಿತ್ರದುರ್ಗ, ಡಿ. 31– ಚಳ್ಳಕೆರೆಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಯೊಬ್ಬ ಸುಮಾರು 4.7 ಲಕ್ಷ ರೂಪಾಯಿ ದುರುಪಯೋಗ ಮಾಡಿಕೊಂಡು, ಆ ಪೈಕಿ ಖಜಾನೆಯ ಸುಮಾರು 3.7 ಲಕ್ಷ ಹಣದೊಡನೆ ಒಂದು ವಾರದಿಂದ ತಲೆಮರೆಸಿಕೊಂಡಿದ್ದಾರೆ. ಈತ ಇಂದಿರಾ ಮಹಿಳಾ ಕೇಂದ್ರ
ಯೋಜನೆಯ 1.3 ಲಕ್ಷ ರೂಪಾಯಿ ಗಳನ್ನು 2 ತಿಂಗಳ ಹಿಂದೆಯೇ ತೆಗೆದು ತಮ್ಮ ವಶದಲ್ಲಿ ಇಟ್ಟುಕೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.