ADVERTISEMENT

ಅಕ್ಕಿ ಬದಲು ಅಗ್ಗದಲ್ಲಿ ಧಾನ್ಯ, ಬೇಳೆ ನೀಡಲಿ

ಡಾ.ಸಮೀರ ಎಲ್.ಹಾದಿಮನಿ
Published 27 ಜೂನ್ 2013, 19:59 IST
Last Updated 27 ಜೂನ್ 2013, 19:59 IST

ವಿವಿಧ ರಾಜಕೀಯ ಪಕ್ಷಗಳು ಪೈಪೋಟಿಗೆ ಬಿದ್ದು ಕನಿಷ್ಠ ದರದಲ್ಲಿ (1 ರೂ) ಅಕ್ಕಿ ಕೊಡು ವುದಾಗಿ ಘೋಷಿಸಿದ್ದವು. ಹೊಸ ಸರ್ಕಾರ ಈಗ ಅನುಷ್ಠಾನಕ್ಕೆ ಮುಂದಾಗಿದೆ. ಬೊಕ್ಕಸದ ನಷ್ಟ ಸರಿದೂಗಿಸಲು ಹೆಣಗಾಡುತ್ತಿದೆ.  ಅಕ್ಕಿ ಎಲ್ಲರಿಗೂ ಮುಖ್ಯ ಆಹಾರವಲ್ಲ. ಉತ್ತರ ಕರ್ನಾಟಕದಲ್ಲಿ ಜೋಳ, ಹಳೇ ಮೈಸೂರು ಭಾಗದಲ್ಲಿ ರಾಗಿ, ಕರಾವಳಿಯಲ್ಲಿ ಕುಚಲಕ್ಕಿ ಮುಖ್ಯ ಆಹಾರ. ಜೋಳ, ರಾಗಿ, ಗೋಧಿಯೊಂದಿಗೆ ಬೇಳೆಕಾಳು  ನ್ಯಾಯಬೆಲೆ ಅಂಗಡಿಯಲ್ಲಿ ಸಿಗುವಂತೆ ಮಾಡಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.