ADVERTISEMENT

ಅಜೆಂಡಾ ಪೂರೈಸುವ ಆತುರ

​ಪ್ರಜಾವಾಣಿ ವಾರ್ತೆ
Published 17 ಜನವರಿ 2012, 19:30 IST
Last Updated 17 ಜನವರಿ 2012, 19:30 IST

`ಭಗವದ್ಗೀತೆ~ಯನ್ನು ಶಾಲಾ ಪಠ್ಯವಾಗಿ ಸೇರಿಸಲು ಜನಾಭಿಪ್ರಾಯವನ್ನು ಸರ್ಕಾರ ಕೇಳಿದೆ. ಕಳೆದ 60-65 ವರ್ಷಗಳಿಂದ ನಮ್ಮ ಶ್ರೇಷ್ಠ ಬಹುವಿಖ್ಯಾತ ಶಿಕ್ಷಣ ತಜ್ಞರಿಗೆ ಹೊಳೆಯದ ವಿಷಯ ನಮ್ಮ ಇಂದಿನ ಬಿಜೆಪಿ ಸರ್ಕಾರಕ್ಕೆ ಹೊಳೆದಿದೆ.

ಎಲ್ಲಿ ಶಾಲೆಗಳು, ಶಿಕ್ಷಕರು ಬೇಕೋ ಅಲ್ಲಿ ಶಾಲೆಗಳಿಲ್ಲ. ವಿಜ್ಞಾನ ಬೋಧಿಸಲು ಶಿಕ್ಷಕರಿಲ್ಲ. ಶಾಲೆಯಲ್ಲಿ ಕುಡಿಯುವ ನೀರಿನ ಸೌಲಭ್ಯವಿಲ್ಲ. ಶೌಚಾಲಯಗಳಿಲ್ಲ. ಇದ್ದರೂ ಅವು ಉಪಯೋಗಿಸುವ ಸ್ಥಿತಿಯಲ್ಲಿಲ್ಲ, ಕೀಲಿ ಜಡಿದಿದ್ದಾರೆ.

ಕುಳಿತುಕೊಳ್ಳಲು ಆಸನಗಳಿಲ್ಲ. ಶಾಲೆಗಳು ಕುರಿದೊಡ್ಡಿಗಳಾಗಿವೆ. ಅವುಗಳನ್ನು ಸುಧಾರಿಸುವ ಪ್ರಾಮಾಣಿಕ ಪ್ರಯತ್ನ ಈ ಸರ್ಕಾರ ಮಾಡುತ್ತಿಲ್ಲ. ವಾಚನಾಲಯಗಳಿಲ್ಲ. ಇದ್ದರೂ ವಿದ್ಯಾರ್ಥಿಗಳಿಗೆ ಲಭ್ಯವಿಲ್ಲ. ಇಂಥ ಸ್ಥಿತಿಯಲ್ಲಿ ಭಗವದ್ಗೀತೆಯನ್ನು ಪಠ್ಯವಾಗಿಸಿದರೆ ಕಲಿಸುವವರಾರು? ಬಿಜೆಪಿ ಸರ್ಕಾರಕ್ಕೆ ತನ್ನ ಆರ್‌ಎಸ್‌ಎಸ್ ಅಜೆಂಡಾ ಪೂರೈಸುವ ಆತುರವಿದ್ದಂತೆ ಕಾಣುತ್ತದೆ.

ಮಕ್ಕಳು ಚೆನ್ನಾಗಿ ಕನ್ನಡದಲ್ಲಿ ಓದಿ ಬರೆದರೆ ಅದೇ ಮಹಾ ಎಂದಾಗ ಈ ಭಗವದ್ಗೀತೆಯನ್ನು ಪಠ್ಯ ಮಾಡುವ ಹುನ್ನಾರವೇತಕ್ಕೆ? ಇದು ಸರ್ಕಾರದ  ಶಿಕ್ಷಣ ಇಲಾಖೆ ಮಾಡುವ ಕೆಲಸವಂತೂ ಅಲ್ಲವೇ ಅಲ್ಲ. ಬೇಕಾದವರು ಗೀತಾ-ಪಾಠ ಪ್ರವಚನಕ್ಕೆ ಹೋಗಲಿ.
 
ಏನೂ ಇಶ್ಯೂ ಇಲ್ಲದಿದ್ದಲ್ಲಿ ಬಿಜೆಪಿ ಅಲ್ಲ ಸಲ್ಲದ (ಇಶ್ಯೂ) ವಿಷಯ ಹುಟ್ಟುಹಾಕುತ್ತದೆ, ಮಾಡಬೇಕಾದ ಒಳ್ಳೆ ಕೆಲಸಗಳು ಸಾಕಷ್ಟಿರುವಾಗ ಇಲ್ಲದ ಉಸಾಬರಿ ಏಕೆ ಮಾಡಬೇಕು?
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.