ಅಡಿಕೆ ಬೆಳೆಗಾರರ ಹಿತರಕ್ಷಣೆ ಬಗ್ಗೆ ಹೋರಾಟ ನಡೆಸಿ ರಾಜಕೀಯ ಕ್ಷೇತ್ರಕ್ಕೆ ಬಂದು ಈಗ ಮುಖ್ಯಮಂತ್ರಿಯಾಗಿರುವ ಸದಾನಂದ ಗೌಡರು ತಮ್ಮ ಚೊಚ್ಚಲ ಬಜೆಟ್‌ನಲ್ಲಿ ಅಡಿಕೆ ಬೆಳೆಗಾರರನ್ನು ಸಂಪೂರ್ಣ ನಿರ್ಲಕ್ಷಿಸಿದ್ದಾರೆ.
ಸಾಲದ ಶೂಲದಲ್ಲಿ ಸಿಕ್ಕಿದ್ದ ಅಡಿಕೆ ಬೆಳೆಗಾರರು ಬಜೆಟ್ಟಿನಲ್ಲಿ ಸಂಪೂರ್ಣ ಸಾಲ ಮನ್ನಾ ನಿರೀಕ್ಷಿಸಿದ್ದರು. ಬೆಳೆಗಾರರಿಗೆ ಸಿಕ್ಕಿದ್ದು ಶೂನ್ಯ ಬಡ್ಡಿಯ ಹೊಸ ಸಾಲದ ಭರವಸೆ ಮಾತ್ರ. ಹಿಂದಿನ ಸಾಲ ಮತ್ತು ಕೊಳೆರೋಗದ ನಷ್ಟದ ಬಗ್ಗೆ ಉಲ್ಲೇಖವೇ ಇಲ್ಲ.
ದ. ಕ. ಜಿಲ್ಲೆಯ ಎಲ್ಲಾ ಶಾಸಕರುಗಳು, ಬಜೆಟ್ ಚರ್ಚೆಯ ವೇಳೆ ಈ ಅಂಶದ ಬಗ್ಗೆ ಚರ್ಚಿಸಿ, ಅಡಿಕೆ ಬೆಳೆಗಾರನ ಸಂಪೂರ್ಣ ಸಾಲ ಮನ್ನಾಕ್ಕೆ ಆಗ್ರಹಿಸಬೇಕೆಂದು ರೈತರ ಬೇಡಿಕೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.