ADVERTISEMENT

ಅವ್ಯವಸ್ಥೆಯ ಪಿಂಚಣಿ ಯೋಜನೆ

​ಪ್ರಜಾವಾಣಿ ವಾರ್ತೆ
Published 4 ಜನವರಿ 2012, 19:30 IST
Last Updated 4 ಜನವರಿ 2012, 19:30 IST

2006ರ ಮಾರ್ಚ್ ನಂತರ ನೇಮಕವಾದ ಎಲ್ಲಾ ನೌಕರರಿಗೂ ಸರ್ಕಾರ ಹೊಸ ಪಿಂಚಣಿ ಯೋಜನೆ (ಎನ್.ಪಿ.ಎಸ್.) ಜಾರಿಗೆ ತಂದಿರುವುದು ಎಲ್ಲರಿಗೂ ತಿಳಿದ ವಿಚಾರ.

ನೌಕರರಿಂದ ಶೇ.10ರಷ್ಟು ವಂತಿಗೆ ವಸೂಲಿ ಮಾಡಿ ಸರ್ಕಾರವೂ ಅಷ್ಟೇ ಪ್ರಮಾಣದ ಹಣ ತೊಡಗಿಸಿ ಬಡ್ಡಿ ಕೊಡುವ ಆಮಿಷ ಒಡ್ಡಿದೆ. ಆದರೆ ಇದಕ್ಕೆ ಯಾವುದೇ ಬಾಂಡ್ ಆಗಲಿ, ಪತ್ರಗಳಾಗಲಿ, ಬಡ್ಡಿ ಎಷ್ಟು ಕೊಡುತ್ತಾರೆ ಎನ್ನುವ ಬಗ್ಗೆ ಎಲ್ಲಿಯೂ ತಿಳಿಸಿಲ್ಲ.

ಮೇಲಿನ ಎಲ್ಲಾ ನ್ಯೂನತೆಗಳಿರುವ ಈ ಯೋಜನೆಗೆ ಒಳಪಟ್ಟಿರುವ ನೌಕರರಿಗೆ ವೇತನವೂ ಸಹ ತಡವಾಗಿ ಆಗುತ್ತಿದೆ. ಅದರ ಜೊತೆ ಎನ್.ಪಿ.ಎಸ್. ಯೋಜನೆಗೆ ಸೇರಿರುವ ಬೇರೆ ನೌಕರರ ವೇತನವೂ ತಡವಾಗುತ್ತಿದೆ. ಹೊಸ ಯೋಜನೆಯಿಂದ ಬೇಸತ್ತಿರುವ ನೌಕರರಿಗೆ ಇದು ಗಾಯದ ಮೇಲೆ ಬರೆ ಎಳೆದಂತಾಗಿದೆ.
 
ಇದರ ಬಗ್ಗೆ ಖಜಾನೆಯಲ್ಲಿ ಕೇಳಿದರೆ ಕಂಪ್ಯೂಟರ್ ಎನ್.ಪಿ.ಎಸ್. ಬಿಲ್ಲನ್ನು ತೆಗೆದು ಕೊಳ್ಳುತ್ತಿಲ್ಲ ಎನ್ನುತ್ತಾರೆ. ಇದು ಸಾಧ್ಯವೇ? ಸಂಬಂಧಪಟ್ಟ ಅಧಿಕಾರಿಗಳು ಈ ಕುರಿತು ಸ್ಪಷ್ಟನೆ ನೀಡಬೇಕು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.