ಗೋಹತ್ಯೆ, ನಿಷೇಧ ಕುರಿತ ಸುರೇಶ್‌ಭಟ್ ತಮ್ಮ ಪತ್ರ (ಪ್ರಜಾವಾಣಿ ವಾ.ವಾ. 8.3.12)ದಲ್ಲಿ ಮಂಡಿಸಿರುವ ವಾದ ಅಸಮರ್ಥನೀಯ. ಕುರಿ, ಕೋಳಿ, ಹಸು, ಪಕ್ಷಿಗಳನ್ನು ನಿಸರ್ಗ (ಆಸ್ತಿಕರಿಗೆ ಭಗವಂತ) ಸೃಷ್ಟಿಸಿರುವುದು ಅವು ಬದುಕಲೆಂದು. ತಿನ್ನಲೆಂದಲ್ಲ. ಸೃಷ್ಟಿಸುವ ಸಾಮರ್ಥ್ಯವಿಲ್ಲದ ಮನುಷ್ಯನಿಗೆ ತಿನ್ನುವ ಅಧಿಕಾರವಿಲ್ಲ. ಅದು ತನ್ನ ಸ್ವಾರ್ಥಕ್ಕಾಗಿ ನಿಸರ್ಗದಿಂದ ಕಸಿದುಕೊಂಡಿದ್ದು. ಈ ಅಮಾನವೀಯತೆಯನ್ನು ವೈಚಾರಿಕತೆಯಿಂದ ಸಮರ್ಥಿಸಿಕೊಳ್ಳಲಾಗದು.
ಗೋವುಗಳ ಸಮತೋಲನವನ್ನು ಕಾಯ್ದುಕೊಳ್ಳಲು ಕೊಲ್ಲುವುದಾದರೆ, ಅದೇ ಮಾನದಂಡವನ್ನು ಜನಸಂಖ್ಯಾ ನಿಯಂತ್ರಣಕ್ಕೂ ಅಳವಡಿಸಬಹುದಲ್ಲ! ಹಸಿದವರೆಲ್ಲ, ದುರ್ಬಲರನ್ನು ಕೊಂದು ಹಸಿವೆ ನೀಗಿಸಿಕೊಳ್ಳಬಹುದು. ಜನಸಂಖ್ಯಾ ಸಮತೋಲನವನ್ನೂ ಕಾಯ್ದುಕೊಂಡಂತಾಗುತ್ತದೆ. ಮುದಿ ಗೋವುಗಳು ರೈತರಿಗೆ ಹೊರೆಯಂತೆ! ಮುದಿ ತಂದೆ ತಾಯಿಗಳು ಸುರೇಶ್‌ಭಟ್ ಅಂಥವರಿಗೆ ಹೊರೆಯೆಂದು ಹೊರಗಟ್ಟುವರೆ? ಇಲ್ಲ..... ಇತರ ಪ್ರಾಣಿಗಳಂತೆ....?
ಪೊಳ್ಳು ವಾದ ಸಮರ್ಥಿಸಲು ವಿ.ಡಿ. ಸಾವರ್ಕರನ್ನು ಬಯಲಿಗೆಳೆದು, ಧಾರ್ಮಿಕ ಸಂವೇದನಗಳನ್ನು ಘಾಸಿಗೊಳಿಸುವ ಅತಿಬುದ್ಧಿವಂತಿಕೆ ಸಲ್ಲದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.