ADVERTISEMENT

ಅಸಹಾಯಕತೆ ಸರಿಯೇ?

ಕೆ.ಎಸ್.ಅಶ್ವತ್ಥನಾರಾಯಣ, ಬೆಂಗಳೂರು
Published 18 ಏಪ್ರಿಲ್ 2016, 19:33 IST
Last Updated 18 ಏಪ್ರಿಲ್ 2016, 19:33 IST

ಪ್ರಧಾನಿ ನರೇಂದ್ರ ಮೋದಿ ಅವರ ಕಾಲು ಎಳೆಯುವ ಉತ್ಸಾಹದಲ್ಲಿ ‘ನಾನು ಚಹ ಅಂಗಡಿ ಇಟ್ಟರೂ ಗಿರಾಕಿಗಳು ಬರಲ್ಲ’ ಎಂದು ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿರುವ ಕಾಂಗ್ರೆಸ್‌ ಧುರೀಣ ಮಲ್ಲಿಕಾರ್ಜುನ ಖರ್ಗೆಯವರ ಹೇಳಿಕೆ (ಪ್ರ.ವಾ., ಏ. 15) ಹಾಸ್ಯಾಸ್ಪದವಾಗಿದೆ.

ಖರ್ಗೆ ಅವರು ಕಾಂಗ್ರೆಸ್‌ನ ಹಿರಿಯ ನಾಯಕ. ಪಕ್ಷದಲ್ಲಿ, ಸರ್ಕಾರದಲ್ಲಿ ಅನೇಕ ಉನ್ನತ ಸ್ಥಾನಗಳನ್ನು ನಿಭಾಯಿಸಿದ್ದಾರೆ.  ಈಗ ಲೋಕಸಭೆಯಲ್ಲಿ ಕಾಂಗ್ರೆಸ್‌ ಸಂಸದೀಯ ಪಕ್ಷದ ನಾಯಕರಾಗಿದ್ದಾರೆ. ಅಂಥವರು ತಮ್ಮ  ಬೆಂಬಲಿಗರಿಗೆ, ಶೋಷಣೆಗೆ ಒಳಗಾದ ಸಮುದಾಯದ ಜನರಿಗೆ, ಯುವಕರಿಗೆ ಧೈರ್ಯ ತುಂಬಬೇಕು. ಅವರಲ್ಲಿ ಆತ್ಮವಿಶ್ವಾಸ ಮೂಡಿಸಬೇಕು. ಅದನ್ನು ಬಿಟ್ಟು ಈ ರೀತಿ ಹೇಳಿರುವುದು ವಿಪರ್ಯಾಸವೇ ಸರಿ!

ಅಪಾರ ರಾಜಕೀಯ ಅನುಭವ ಹೊಂದಿರುವ ಇವರೇ ಹೀಗೆ ಅಸಹಾಯಕತೆ ವ್ಯಕ್ತಪಡಿಸಿದರೆ ಜನಸಾಮಾನ್ಯರ ಗತಿ? ಖರ್ಗೆ ಅಂಥವರು ಈ ಕುರಿತು ಯೋಚಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.