ADVERTISEMENT

ಅಸ್ಮಿತೆ ಚರ್ಚೆಯಾಗಲಿ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2018, 19:30 IST
Last Updated 28 ಮಾರ್ಚ್ 2018, 19:30 IST

ಕಳೆದ ಒಂದು ವರ್ಷದಿಂದ ಕನ್ನಡ ಭಾಷೆಯ ಅಸ್ಮಿತೆಯ ವಿಚಾರ ಚರ್ಚೆಯಾಗುತ್ತಿದೆ. ‘ನಮ್ಮ ಮೆಟ್ರೊ’ ದಲ್ಲಿ ಕನ್ನಡ ಅನುಷ್ಠಾನ, ಕೇಂದ್ರೀಯ ನೇಮಕಾತಿ ಪರೀಕ್ಷೆಗಳನ್ನು ಕನ್ನಡದಲ್ಲೇ ನಡೆಸಬೇಕು, ಕೇಂದ್ರ ಸರ್ಕಾರ ಹಾಗೂ ಅದರ ಅಧೀನ ಇಲಾಖೆಗಳು ನಡೆಸುವ ಬ್ಯಾಂಕಿಂಗ್ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳನ್ನು ಕನ್ನಡವೂ ಸೇರಿದಂತೆ ಎಲ್ಲಾ ಪ್ರಾದೇಶಿಕ ಭಾಷೆಗಳಲ್ಲಿ ಕೊಡಬೇಕು ಎಂಬ ಒತ್ತಾಯಗಳನ್ನು ಮಾಡಲಾಗುತ್ತಿದೆ.

ನಮ್ಮ ದೇಶವನ್ನು ಉತ್ತರ ಭಾರತೀಯರೇ ಹೆಚ್ಚಾಗಿ ಆಳಿದ್ದಾರೆ. ಆದ್ದರಿಂದ ದಕ್ಷಿಣ ಭಾರತ ಹಾಗೂ ಇಲ್ಲಿನ ಭಾಷೆ– ಸಂಸ್ಕೃತಿಗಳನ್ನು ನಿರ್ಲಕ್ಷ್ಯ ಮಾಡಲಾಗಿದೆ. ಈ ಬಾರಿಯ ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿ ಕನ್ನಡ ಭಾಷೆಯ ಅಳಿವು– ಉಳಿವಿನ ವಿಚಾರ ಚರ್ಚೆಗೆ ಬರಬೇಕು. ಪ್ರಮುಖ ಪಕ್ಷಗಳ ಪ್ರಣಾಳಿಕೆಗಳಲ್ಲಿ ಅದು ಪ್ರಸ್ತಾಪವಾಗಬೇಕು. ಮುಖ್ಯವಾಗಿ ಕೇಂದ್ರೀಯ ನೇಮಕಾತಿ ಪರೀಕ್ಷೆಗಳನ್ನು ಕನ್ನಡದಲ್ಲಿಯೂ ನಡೆಸುವಂತೆ ನಾಡಿನ ಚಿಂತಕರು ಒತ್ತಡ ಹೇರಬೇಕು.

– ಗಿರಿ ಚನ್ನಗಿರಿ, ದಾವಣಗೆರೆ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.