ADVERTISEMENT

ಆರೋಗ್ಯ ಕೇಂದ್ರ, ಅಂಚೆ ಕಚೇರಿ ಬೇಕು

​ಪ್ರಜಾವಾಣಿ ವಾರ್ತೆ
Published 1 ಜೂನ್ 2011, 9:30 IST
Last Updated 1 ಜೂನ್ 2011, 9:30 IST

ವಿದ್ಯಾಮಾನ್ಯ ನಗರ, ಕಾಳಿಕಾನಗರ, ಓಂಕಾರನಗರ, ಶ್ರೀ ರಾಘವೇಂದ್ರ ನಗರ, ಆಂದ್ರಹಳ್ಳಿ, ಡಿ ಗ್ರೂಪ್ ಎಂಪ್ಲಾಯಿಸ್ ಕಾಲೋನಿಗಳಲ್ಲಿ ಹೆಚ್ಚಾಗಿ ವಾಸಿಸುತ್ತಿರುವವರು ಬಡವರು, ಮಧ್ಯಮ ವರ್ಗದವರು. ಇವರೆಲ್ಲ ಸರ್ಕಾರಿ ಸೌಕರ್ಯ ಸರಿಯಾಗಿ ದೊರೆಯದ ಕಾರಣ ಖಾಸಗಿ ಆಸ್ಪತ್ರೆಗಳಿಗೆ ಹೋಗಿ ದುಬಾರಿ ಹಣ ತೆತ್ತು ಚಿಕಿತ್ಸೆ ಪಡೆಯುವ ಸ್ಥಿತಿಯಿದೆ. ಬಡವರಂತೂ ಹಣ ತೆರಲಾಗದೇ ಚಿಕಿತ್ಸೆಯಿಂದ ವಂಚಿತರಾಗುತ್ತಿದ್ದಾರೆ.

ಇದೇ ರೀತಿ ಇಲ್ಲಿ ಅಂಚೆ ಕಚೇರಿಯೂ ಇಲ್ಲದೆ ತೊಂದರೆಯಾಗುತ್ತಿದೆ. ಆದ್ದರಿಂದ ಸಾರ್ವಜನಿಕರ ಹಿತದೃಷ್ಟಿಯಿಂದ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಅಂಚೆ ಕಚೇರಿಯನ್ನು ಆದಷ್ಟು ಬೇಗ ತೆರೆಯಲು ಸಂಬಂಧಪಟ್ಟವರು ಕ್ರಮ ಕೈಗೊಳ್ಳಲಿ ಎಂದು ಮನವಿ.


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.