
ಪ್ರಜಾವಾಣಿ ವಾರ್ತೆಬೆಂಗಳೂರಿನ ಹಲವಾರು ಆಸ್ಪತ್ರೆ ಮತ್ತು ಸರ್ಕಾರಿ ಕಚೇರಿಗಳಲ್ಲಿ ನಾಗರಿಕರು ಸುಲಭವಾಗಿ ನಡೆದಾಡಲು ಸಾಧ್ಯವಾಗಿರುವುದಿಲ್ಲ. ಎಲ್ಲಾ ಕಡೆ ನೆಲವನ್ನು ಗ್ರಾನೈಟ್ ಇಲ್ಲವೆ ನಯವಾಗಿರುವ ಟೈಲ್ಸ್‌ಗಳನ್ನು ಅಳವಡಿಸಿರುತ್ತಾರೆ. ಬಹಳಷ್ಟು ನಾಗರಿಕರು ಜಾರಿಬಿದ್ದಿರುತ್ತಾರೆ. ವಯಸ್ಸಾದವರು ಮತ್ತು ಕಾಯಿಲೆಯಿಂದ ನರಳುವವರಿಗೆ ಈ ನೆಲದ ಮೇಲೆ ಓಡಾಡುವುದು ಅಪಾಯವಾಗುತ್ತದೆ. ಆದ್ದರಿಂದ ಆಸ್ಪತ್ರೆ, ಸರ್ಕಾರಿ ಕಚೇರಿಗಳ ನೆಲವನ್ನು ಸ್ವಲ್ಪಮಟ್ಟಿಗೆ ಒರಟಾಗಿದ್ದರೆ ಸಾರ್ವಜನಿಕರಿಗೆ ಅಪಾಯ ಉಂಟಾಗುವುದನ್ನು ತಪ್ಪಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.