ADVERTISEMENT

ಇದು ಯಾರ ಮನೆ ದುಡ್ಡು?

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2012, 19:30 IST
Last Updated 2 ಏಪ್ರಿಲ್ 2012, 19:30 IST

ಜನ ಪ್ರತಿನಿದಿಗಳು ಮನಸ್ಸಿಗೆ ಬಂದಂತೆ ವೇತನವನ್ನು ಹೆಚ್ಚಿಸಿಕೊಳ್ಳಲು ಮಾಜಿ ಶಾಸಕರಿಗೆ ಪಿಂಚಣಿ ಪರಿಷ್ಕರಣೆ ಮಾಡಿಕೊಡಲು ಯಾವುದೇ ಆಯೋಗದ ಶಿಫಾರಸ್ಸಿನ ಅಗತ್ಯವಿಲ್ಲವೇ?  ಇದು ಯಾರಪ್ಪನ ಮನೆಯ ದುಡ್ಡು?

ಬೇರೆ ಯಾವುದೇ ಇಲಾಖೆ ಸಿಬ್ಬಂದಿಗೆ ವೇತನ ಹೆಚ್ಚಳ ಮಾಡಲು ಹಿಂದು ಮುಂದು ನೋಡುವ ಜನಪ್ರತಿನಿಧಿಗಳಿಗೆ ತಮ್ಮ ವೇತನ ಹೆಚ್ಚಳಕ್ಕೆ ಯಾವ ವಿರೋಧವೂ ಇಲ್ಲವೇ? ಇವರೇನು ಎಲ್ಲದಕ್ಕೂ ಸರ್ವಸ್ವತಂತ್ರರೇ?

ದೇಶದ ಕಾನೂನು ಎಲ್ಲರಿಗೂ ಒಂದೇ ರೀತಿ ಅನ್ವಯಿಸುತ್ತದೆ. ಹಾಗಿದ್ದರೂ ಇವರು ಜನತೆಯ ತೆರಿಗೆ ಹಣವನ್ನು ತಿಂಗಳಿಗೆ ಲಕ್ಷಾಂತರ ರೂಪಾಯಿ ವೇತನ ರೂಪದಲ್ಲಿ ಪಡೆಯುತ್ತಿದ್ದಾರೆ.

ಮಾಜಿ ಶಾಸಕರಿಗೆ ನಿವೃತ್ತಿ ವೇತನ ನೀಡಲು ಅವರೇನು ರಾಜಕೀಯ ನಿವೃತ್ತಿ ಪಡೆದಿದ್ದಾರೆಯೆ? ಅವರು ಒಮ್ಮೆ ಆಧಿಕಾರಕ್ಕೆ ಬಂದು ನಂತರ ಸಂಪೂರ್ಣ ರಾಜಕೀಯ ನಿವೃತ್ತಿ ಪಡೆದರೆ ನಿವೃತ್ತಿ ವೇತನ ನೀಡಲಿ.

ಅದು ಬಿಟ್ಟು ಒಮ್ಮೆ ಸೋತು ಮತ್ತೆ ರಾಜಕೀಯದಲ್ಲಿ ಸಕ್ರಿಯವಾಗಿರುವ ಸದಸ್ಯನಿಗೆ ತಿಂಗಳಿಗೆ 20000 ರಿಂದ 30000 ಸಾವಿರ ಕೊಡುವುದು ಯಾವ ನ್ಯಾಯ? ಇವರು ಯಾವ ಪದವಿ ಪಡೆದು ಈ ಸ್ಥಾನ ಪಡೆದಿದ್ದಾರೆ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.