ADVERTISEMENT

ಇದು ಹೇಗೆ ಸಾಧ್ಯ?

​ಪ್ರಜಾವಾಣಿ ವಾರ್ತೆ
Published 6 ಮೇ 2018, 19:30 IST
Last Updated 6 ಮೇ 2018, 19:30 IST

ಪಿಯುಸಿ ಫಲಿತಾಂಶ ಪ್ರಕಟವಾಗಿದೆ. ಅನೇಕ ವಿದ್ಯಾರ್ಥಿಗಳು ಶೇ 96, ಶೇ 97ರಷ್ಟು ಅಂಕ ಗಳಿಸಿದ್ದಾರೆ. ಅಂಥವರ ಭಾವಚಿತ್ರ, ಸಂದರ್ಶನಗಳು ಮಾಧ್ಯಮಗಳಲ್ಲಿ ಪ್ರಕಟವಾಗಿವೆ.

ಈ ವಿಚಾರದಲ್ಲಿ ನನಗೊಂದು ಸಂದೇಹವಿದೆ. ವಿಜ್ಞಾನ, ಗಣಿತ ವಿಷಯಗಳಲ್ಲಿ ಇಷ್ಟೊಂದು ಅಂಕ ಪಡೆಯಲು ಸಾಧ್ಯವಿದೆ. ಆದರೆ ಭಾಷಾ ವಿಷಯದಲ್ಲಿ ಇಷ್ಟು ಅಂಕ ಪಡೆಯುವುದು ಸಾಧ್ಯವೇ? ಅದರಲ್ಲೂ ಕನ್ನಡ ಭಾಷೆಯಲ್ಲಿ ಉತ್ತರಿಸುವಾಗ ಎಷ್ಟೇ ಬುದ್ಧಿವಂತನಾದರೂ ಇಷ್ಟೊಂದು ಅಂಕ ಪಡೆಯುವುದು ಖಂಡಿತಾ ಸಾಧ್ಯವಿಲ್ಲ. ಮೌಲ್ಯಮಾಪಕರು ಯಾವ ದೃಷ್ಟಿಕೋನದಿಂದ ಮೌಲ್ಯಮಾಪನ ಮಾಡಿ ಅಂಕ ನೀಡುತ್ತಾರೆಂಬುದನ್ನು ತಿಳಿದುಕೊಳ್ಳಬೇಕಾಗಿದೆ.

ನಾವು ಕನ್ನಡದಲ್ಲಿ ಒಂದು ಪತ್ರ ಬರೆದು ಅದನ್ನು ನಾಲ್ಕೈದು ಬಾರಿ ಓದಿದರೂ ಪೂರ್ತಿ ಸರಿಯಾಗಿದೆಯೋ ಇಲ್ಲವೋ ಎಂಬ ಅನುಮಾನ ಇದ್ದೇ ಇರುತ್ತದೆ. ಅಂಥದ್ದರಲ್ಲಿ ವಿದ್ಯಾರ್ಥಿಗಳು ಇಷ್ಟೊಂದು ಅಂಕ ಹೇಗೆ ಪಡೆಯುತ್ತಾರೆ ಎಂಬುದನ್ನು ಸಂಬಂಧಿಸಿದ ಅಧಿಕಾರಿಗಳು ತಿಳಿಸಬೇಕು.

ADVERTISEMENT

–ಎ.ಕೆ. ಅನಂತಮೂರ್ತಿ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.