ADVERTISEMENT

ಈ ಭಾಗ್ಯಕ್ಕೆ ಚುನಾವಣೆ ಬೇಕಿತ್ತೇ?

​ಪ್ರಜಾವಾಣಿ ವಾರ್ತೆ
Published 16 ಮೇ 2018, 19:30 IST
Last Updated 16 ಮೇ 2018, 19:30 IST

ರಾಜ್ಯದ ಸದ್ಯದ ರಾಜಕೀಯ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ನೋಡಿದಾಗ ರಾಜಕೀಯ ಕಗ್ಗಂಟು ಸುಲಭವಾಗಿ ಬಗೆಹರಿಯುವ ಲಕ್ಷಣ ಕಾಣುವುದಿಲ್ಲ. ರಾಜ್ಯಪಾಲರು ಯಾವುದೇ ನಿರ್ಣಯ ನೀಡಿದರೂ ಅದು ಅಲ್ಪಕಾಲೀನ ಆಗುವ ಸಂಭವವೇ ಹೆಚ್ಚು. ಅಪರೇಷನ್ ಕಮಲ- ಕೈ, ಪಂಚತಾರಾ ಹೋಟೆಲ್- ರೆಸಾರ್ಟ್ ವಾಸ್ತವ್ಯ, ಕುದುರೆ ವ್ಯಾಪಾರ ಮುಂತಾದ ತೊಂಬತ್ತರ ದಶಕದ ಕೆಲವು ಕಹಿ ಘಟನೆಗಳು (ರಾಮಕೃಷ್ಣ ಹೆಗಡೆಯವರ ಮೇಲೆ ದಾಳಿ) ಪುನರಾವರ್ತನೆಯಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.

ಅಭಿವೃದ್ಧಿಪರ, ಸುಗಮ ಆಡಳಿತ ಮರೀಚಿಕೆ ಎಂಬಂತಿದೆ. ಗದ್ದುಗೆ ಗುದ್ದಾಟದಲ್ಲಿ ರಾಜ್ಯ ಮುಂದಿನ ದಿನಗಳಲ್ಲಿ ಇನ್ನೊಂದು ಚುನಾವಣೆಯನ್ನು ಎದುರಿಸುವ ಸಂಭವ ಬರಬಹುದೇನೋ ಎನಿಸುತ್ತದೆ. ಗದ್ದುಗೆ ಹಿಡಿಯಲು ಕೆಲವರ ಅವಸರ ಮತ್ತು ಅಸಹನೆ ನೋಡಿದರೆ ಅಸಹ್ಯ ಬರುತ್ತದೆ. ಫಲಿತಾಂಶ ಹೊರಬಿದ್ದ ಒಂದೇ ದಿನಕ್ಕೆ ಜನಸಾಮಾನ್ಯ ಸುಸ್ತಾಗಿದ್ದು, ಈ ಭಾಗ್ಯಕ್ಕೆ ಚುನಾವಣೆ ಬೇಕಿತ್ತೇ ಎಂದು ಕೇಳುವಂತಾಗಿದೆ.

ರಮಾನಂದ ಶರ್ಮಾ, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.