ADVERTISEMENT

ಉತ್ತಮ ಬೆಳವಣಿಗೆ

ಕೆ.ಸಿ.ರತ್ನಶ್ರೀ ಶ್ರೀಧರ್‌
Published 28 ನವೆಂಬರ್ 2012, 19:42 IST
Last Updated 28 ನವೆಂಬರ್ 2012, 19:42 IST

ಸರ್ಕಾರಿ ಕಚೇರಿ ಹಾಗೂ ವಸತಿ ಕಟ್ಟಡಗಳನ್ನು `ವಾಸ್ತು ಹೆಸರಿನಲ್ಲಿ ನವೀಕರಿಸುವುದು ಹಾಗೂ ಸರ್ಕಾರಿ ಕಚೇರಿಗಳಲ್ಲಿ ಹೋಮ, ಹವನ, ಪೂಜೆ-ಪುನಸ್ಕಾರದಂತಹ ಧಾರ್ಮಿಕ ಚಟುವಟಿಕೆ ನಡೆಸದಂತೆ ನಿಷೇಧಿಸುವ~ ಮಸೂದೆಯನ್ನು ಸರ್ಕಾರವೇ ಮಂಡಿಸಲು ನಿರ್ಧರಿಸಿರುವುದು ಉತ್ತಮವಾದ ಬೆಳವಣಿಗೆಯಾಗಿದೆ.

ಇನ್ನು ಮುಂದಾದರೂ ಸರ್ಕಾರಿ ಕಟ್ಟಡಗಳ  ನವೀಕರಣದ ಹೆಸರಲ್ಲಿ ಕೋಟಿ ಕೋಟಿ ಸರ್ಕಾರಿ ಹಣ ಪೋಲಾಗುವುದನ್ನು ತಡೆಗಟ್ಟಬಹುದು. ಜೊತೆಗೆ ಸರ್ಕಾರಿ ಕಚೇರಿಗಳಲ್ಲಿ ಧಾರ್ಮಿಕ ಚಟುವಟಿಕೆ ನಡೆಸುವುದನ್ನು ನಿಷೇಧಿಸುವುದರಿಂದ ಸಂವಿಧಾನದ ಜಾತ್ಯತೀತ ತತ್ವದ ಆಶಯವನ್ನು ಎತ್ತಿ ಹಿಡಿದಂತಾಗುತ್ತದೆ.

ಸಂವಿಧಾನದಲ್ಲಿ ಇದು ಜಾರಿಯಲ್ಲಿದ್ದರೂ, ಇತ್ತೀಚೆಗೆ ಅದನ್ನು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಈ ಆಶಯವನ್ನು ಗಾಳಿಗೆ ತೂರಿದ್ದರು. ಮಸೂದೆ ಜಾರಿಯಾದ ನಂತರವಾದರೂ ಇದಕ್ಕೆ ಕಡಿವಾಣ ಬೀಳಬಹುದು. ಕಾನೂನನ್ನು ಉಲ್ಲಂಘಿಸಿದವರಿಗೆ ತಕ್ಕ ಶಿಕ್ಷೆಯಾಗಬೇಕು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.