ಕೃಷ್ಣಮೃಗ ಬೇಟೆಯಾಡಿ ವನ್ಯಜೀವಿ ಕಾಯ್ದೆ ಉಲ್ಲಂಘಿಸಿದ, ಕುಡಿದು ಮತ್ತೇರಿ ಅಡ್ಡಾದಿಡ್ಡಿ ಕಾರು ಓಡಿಸಿ ಬಡವರನ್ನು ಕೊಂದ ಸಿರಿವಂತ ಸಲ್ಮಾನ್ ಖಾನ್ ಬಗ್ಗೆ ನಮ್ಮ ಸೆಲೆಬ್ರಿಟಿಗಳಿಗೆ ಏಕೆ ಇಷ್ಟೊಂದು ಕರುಣೆ? ಕೂಲಿ ಮಾಡಿ ಗಳಿಸಿದ ಹಣದಲ್ಲಿ ಸಿನಿಮಾ ನೋಡುವ ಮೂಲಕ ಅನೇಕ ನಾಯಕಶಿಖಾಮಣಿಗಳ ತಾರಾಪಟ್ಟಕ್ಕೆ ಕಾರಣರಾದ ಬಡಜನರ ಬಗ್ಗೆ ಏಕೆ ಇವರಿಗೆ ತಾತ್ಸಾರ?
ಕೃಷ್ಣಮೃಗ ಹಾಗೂ ಬಡವರು ಇರುವುದೇ ಸಾಯಿಸಲಿಕ್ಕಾಗಿ ಎಂಬ ಧೋರಣೆ ಸಲ್ಮಾನ್‌ಗೆ ಇರುವಂತಿದೆ. ಇಂತಹ ಮನಸ್ಥಿತಿಯ ನಟನ ಬಗ್ಗೆ ಜನಸಾಮಾನ್ಯರು ಎಚ್ಚೆತ್ತುಕೊಳ್ಳಬೇಕಾಗಿದೆ. ಇಂಥವರನ್ನು ಯುವಜನರು ಅನುಕರಿಸಬಾರದು. ತೆರೆಯ ಮೇಲೆ ನಾಯಕರಾಗಿ, ನಿಜಜೀವನದಲ್ಲಿ ಖಳನಾಯಕರಂತಿರುವ ಇವರ ಮುಖವಾಡ ಕಳಚಿಬಿದ್ದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.