ಭ್ರಷ್ಟಾಚಾರದಲ್ಲಿ ಭಾರತ
ಮುಂಚೂಣಿ ಅಂತೆ,
ಅದರಲ್ಲಷ್ಟೇ ಏಕೆ,
ಬಡತನದಲ್ಲಿ
ಬೆಲೆ ಏರಿಕೆಯಲ್ಲಿ
ಅನಾರೋಗ್ಯ, ಅಪೌಷ್ಟಿಕತೆಯಲ್ಲಿ
ಜನಸಂಖ್ಯೆಯಲ್ಲಿ
ಪರಿಸರ ಮಾಲಿನ್ಯದಲ್ಲಿ
ನಿರುದ್ಯೋಗದಲ್ಲಿ
ಗರ್ಭಿಣಿ, ನವಜಾತ ಶಿಶು ಮರಣದಲ್ಲಿ
ಅತ್ಯಾಚಾರದಲ್ಲಿ
ಅಪರಾಧ ಅಪಘಾತಗಳಲ್ಲಿ
ಇನ್ನೂ ಅನೇಕ ವಿಷಯಗಳಲ್ಲಿ
ಭಾರತ ಮುಂಚೂಣಿ ಸಾಧಿಸಲು
ಶಕ್ತಿಮೀರಿ ಶ್ರಮಿಸುತ್ತಿದೆ.
ನಾವೆಲ್ಲ ಅತಿ ಹೆಮ್ಮೆಯಿಂದ
ಹೇಳುತ್ತೇವೆ `ಮೇರಾ ಭಾರತ್ ಮಹಾನ್'!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.