ADVERTISEMENT

ಏಕರೂಪ ಶಿಕ್ಷಣ ಪದ್ಧತಿ ಜಾರಿಗೆ ಬರಲಿ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2012, 19:30 IST
Last Updated 15 ಫೆಬ್ರುವರಿ 2012, 19:30 IST

ನಮ್ಮ ದೇಶದಲ್ಲಿ ಸರ್ಕಾರಿ ಮತ್ತು ಸರ್ಕಾರೇತರ ಶಾಲಾ ಕಾಲೇಜುಗಳಲ್ಲಿ ಕೇಂದ್ರ, ಕೇಂದ್ರಾಡಳಿತ, ರಾಜ್ಯ ಹಾಗೂ ಪ್ರಾದೇಶಿಕ ಪ್ರದೇಶಗಳಲ್ಲಿ ಒಂದೊಂದು ರೀತಿಯ ಶಿಕ್ಷಣ ಪದ್ಧತಿ ಇದೆ. ಇಡೀ ದೇಶಕ್ಕೆ ಅನ್ವಯವಾಗುವ ಒಂದೇ ಬಗೆಯ  ಶಿಕ್ಷಣ ನೀತಿ, ಪಠ್ಯ ಕ್ರಮ ಜಾರಿಗೆ ತರುವ ಅಗತ್ಯವಿದೆ.

ದೇಶದ ಎಲ್ಲ ಜಾತಿ, ವರ್ಗಗಳ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ನೀಡುವ ಅಗತ್ಯವಿದೆ. ಅದರ ಕಡೆಗೆ ಸರ್ಕಾರ ಗಮನ ಕೊಡಬೇಕು. ಸಮಾನ ಶೈಕಣಿಕ ವಾತಾವರಣ ನಿರ್ಮಾಣ ಮಾಡುವುದರ ಜತೆಗೆ ಏಕರೂಪ ಶಿಕ್ಷಣ ಪದ್ಧತಿ ಜಾರಿಗೆ ಬರಬೇಕು.

ಶಿಕ್ಷಣ ಮಾಧ್ಯಮ, ಬೋಧನಾ ಕ್ರಮ, ಗುಣಮಟ್ಟ, ಮೌಲ್ಯಗಳು, ಶಾಲಾ ವೇಳಾಪಟ್ಟಿ, ಪರೀಕ್ಷಾ ಪದ್ಧತಿ, ಮೌಲ್ಯಮಾಪನ, ಫಲಿತಾಂಶ ಇತ್ಯಾದಿ ಎಲ್ಲಾ ವ್ಯವಸ್ಥೆಯಲ್ಲೂ ಏಕರೂಪತೆ ಇರಬೇಕು.

ಇಂಥ ಶಿಕ್ಷಣ ಪದ್ಧತಿ ಜಾರಿಗೆ ತರುವುದು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಕರ್ತವ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.