ADVERTISEMENT

ಒಸಾಮಾ ಢುಂ !

​ಪ್ರಜಾವಾಣಿ ವಾರ್ತೆ
Published 2 ಮೇ 2011, 19:30 IST
Last Updated 2 ಮೇ 2011, 19:30 IST

ಓ ಬರಾಕ ಒಬಾಮಾ ಬಂದ್ರು
ಒಸಾಮಾ ಬಿನ್ ಲಾಡೆನ್ ಕೊಂದ್ರು !
ಕಣ್ಣೀರಿಗೆ ಕಂಪು ತಂದ್ರು
ಉರಿದೋರು ಉರಿ ಉಂಡ್ರು !
ಅಬೋಟಾಬಾದಿನಲ್ಲಿತ್ತು-
ಬಿಲಾಲ್ ಬಿಲದಿ ಅಡಗಿತ್ತು !

ಉಗ್ರವಾದದ ವ್ಯಗ್ರರೂಪ
ಕೆಟ್ಟ ಮರಣಗಳ ಕ್ರೂರಕೂಪ
ಕಡೆಗೊಮ್ಮೆ ಕೆಂಡಕ್ಕೆ ಧೂಪ !!
ಮುಗಿಯಬಹುದೇ ಸಂತಾಪ ?

ಓ ಮಹಾಪಾಪಿ ಲಾಡೆನ್-
ನೀ ಹೋದಮೇಲಾದರೂ
ಕಾಣಬಹುದೇ ಈಡನ್??

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT