ADVERTISEMENT

ಕಂದಾಚಾರಕ್ಕೆ ಗುದ್ದು!

ಎಲ್.ಎನ್.ಪ್ರಸಾದ್, ತುರುವೇಕೆರೆ
Published 8 ಅಕ್ಟೋಬರ್ 2013, 19:30 IST
Last Updated 8 ಅಕ್ಟೋಬರ್ 2013, 19:30 IST

ಕಂದಾಚಾರಕ್ಕೆ ಗುದ್ದು!

ಚಾಮರಾಜನಗರಕ್ಕೆ
ಕಾಲಿಟ್ಟ
ಅರಸು, ಗುಂಡೂರಾವ್
ಕಳೆದುಕೊಂಡರು ಸಿ.ಎಂ ಗಾದಿ!
ಹೆಗಡೆ, ಬೊಮ್ಮಾಯಿ, ಪಾಟೀಲರಿಗೂ
ಬಿಡಲಿಲ್ಲ ಶಾಪದಾ ಮಂಕುಬೂದಿ
ಮೂಢನಂಬಿಕೆಗೆ ಬಲಿಯಾಗಿ
ಪಟೇಲಾದಿಗಳಿಗೆ ಕಾಡಿತ್ತು
ಹೆದರಿಕೆಯ ಭೇದಿ!
ಇದೀಗ ಸಿದ್ದು
ಮೌಢ್ಯ, ಕಂದಾಚಾರಕ್ಕೆ
ಹಾಕಿದ್ದಾರೆ ಗುದ್ದು!
ಬಾರಿಸಿದ್ದಾರೆ ಜಾಗೃತಿಯ ಡಮರು
ಕಾಲು ಹಿಡಿದು ಎಳೆಯುವವರಿಗೆ
ಹಾಕಿದ್ದಾರೆ
ಸವಾಲಿನ ಗುಟುರು!
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.