ADVERTISEMENT

ಕಚ್ಚಾಟ ನಿಲ್ಲಿಸಿ!

ಎ.ವಿ.ಶಾಮರಾವ್‌
Published 11 ಜೂನ್ 2018, 20:13 IST
Last Updated 11 ಜೂನ್ 2018, 20:13 IST

ರಾಜ್ಯದಲ್ಲಿ ಹೊಸ ಸರ್ಕಾರ ರಚನೆಯಾಗಿದೆ. ಹೊಸ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಸಚಿವರುಗಳಲ್ಲಿ ನಾಡಿನ ಆರು ಕೋಟಿ ಜನರ ಪರವಾಗಿ ಮಾಡುವ ವಿನಂತಿ ಎಂದರೆ ಮೊದಲು ಕಚ್ಚಾಟ ನಿಲ್ಲಿಸಿ, ಕೊಟ್ಟಿರುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಿ.‍

ಜನರಿಗೆ ನೀರು, ವಿದ್ಯುತ್ ಒದಗಿಸಿ. ಉತ್ತಮ ರಸ್ತೆಗಳನ್ನು ನಿರ್ಮಿಸಿ. ಸರ್ಕಾರಿ ಕನ್ನಡ ಶಾಲೆಗಳ ಸ್ಥಿತಿ ಸುಧಾರಿಸಲಿ. ಸರ್ಕಾರಿ ಆಸ್ಪತ್ರೆಗಳನ್ನು ಇನ್ನಷ್ಟು ಉತ್ತಮಗೊಳಿಸಲು ಪ್ರಯತ್ನಿಸಿರಿ.

ಜನಪ್ರತಿನಿಧಿಗಳೆಲ್ಲರೂ ಬೆಂಗಳೂರಿನಲ್ಲೇ ಉಳಿಯದೆ, ತಮ್ಮ ಕ್ಷೇತ್ರಗಳಲ್ಲಿ ನಿಂತು ಕೆಲಸ ಮಾಡುವಂತಾಗಲಿ. ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಈ ವಿಚಾರಗಳ ಕಡೆಗೆ ಗಮನಹರಿಸಿದರೆ ಮಾತ್ರ ಮತದಾರರ ಮನ್ನಣೆಗೆ ಪಾತ್ರರಾಗುವರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.