
ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿ ಭದ್ರತಾ ಕೆಲಸ ನಿರ್ವಹಿಸುವ ಬಹುತೇಕ ಕಾವಲುಗಾರರಿಗೆ ಕನ್ನಡ ಗೊತ್ತಿಲ್ಲ. ಅವರ ಜೊತೆ ಮಾತನಾಡುವುದೇ ದೊಡ್ಡ ಸಮಸ್ಯೆ. ಜೊತೆಗೆ ಕಾವಲುಗಾರರ ಹಿನ್ನೆಲೆ ತಿಳಿಯದೆ ಕೆಲಸಕ್ಕೆ ಸೇರಿಸಿಕೊಂಡು, ಅವರು ಮಾಡಬಾರದ ತಪ್ಪುಗಳನ್ನು ಮಾಡುವುದು ಸುದ್ದಿಯಾಗುತ್ತಲೇ ಇರುತ್ತದೆ.
ಯಾವುದೇ ಒಂದು ನಾಡಿನಲ್ಲಿ ಕೆಲಸ ಮಾಡುವಾಗ ಅಲ್ಲಿನ ನುಡಿ ತಿಳಿಯದಿದ್ದರೆ ಕೆಲಸ ನೆರವೇರಿಸುವುದು ಒಂದು ತೊಡಕು. ಕಾವಲುಗಾರರ ವಿಷಯದಲ್ಲಂತೂ ಬರೀ ಅವರೊಂದಿಗೆ ಸಂಪರ್ಕಕ್ಕೆ ಬರುವವರಿಗಷ್ಟೇ ತೊಡಕಾಗುವುದಿಲ್ಲ. ಅವರು ಕೆಲಸ ಮಾಡುವ ಸಂಸ್ಥೆಯ ವಿರುದ್ಧ ಅವರ ಮೂಗಿನ ಕೆಳಗೇ ಇತರರು ಸಂಚು ಹೂಡಿದರೂ ಅವರಿಗೆ ಅದು ತಿಳಿಯದೆ ಸುಮ್ಮನಿರುವ ಸಾಧ್ಯತೆಯೇ ಹೆಚ್ಚು. ಹೀಗಾಗಿ ಭದ್ರತಾ ಸಿಬ್ಬಂದಿಗೆ ಕಡ್ಡಾಯವಾಗಿ ಕನ್ನಡ ಗೊತ್ತಿರಬೇಕೆಂಬ ನಿಯಮವನ್ನು ಸರ್ಕಾರ ರೂಪಿಸಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.