ADVERTISEMENT

ಕಸ ಮುಕ್ತಗೊಳಿಸಿ

​ಪ್ರಜಾವಾಣಿ ವಾರ್ತೆ
Published 11 ಜುಲೈ 2016, 19:30 IST
Last Updated 11 ಜುಲೈ 2016, 19:30 IST

ಜೆ. ಪಿ. ನಗರದ ಮೊದಲನೆ ಹಂತದಲ್ಲಿರುವ ಆಕ್ಸ್‌ಫರ್ಡ್‌ ಶಾಲೆ ಹಾಗೂ ಪಕ್ಕದಲ್ಲಿರುವ ಆಟದ ಮೈದಾನದ ಮದ್ಯದಲ್ಲಿರುವ 10ನೇ ಬಿ ಅಡ್ಡರಸ್ತೆ ಕಸ ಸುರಿಯುವ ಮತ್ತು ವಾಹನ ಪಾರ್ಕಿಂಗ್‌ ಮಾಡುವ ರಸ್ತೆಯಾಗಿ ಮಾರ್ಪಾಡಾಗಿದೆ.

ಸಾವಿರಾರು ಮಕ್ಕಳು ಶಾಲೆಗೆ ಹೋಗಲು ಮತ್ತು ಆಟವಾಡಲು ಮೈದಾನಕ್ಕೆ ಹೋಗಬೇಕಾದರೆ ಇದೇ ರಸ್ತೆಯನ್ನೇ ಬಳಸಬೇಕಾಗಿದೆ. ರಸ್ತೆಯನ್ನು ದಾಟುವಾಗ ಮಕ್ಕಳಿಗೆ ಕಸದ ವಾಸನೆ ಜೊತೆಗೆ ರಸ್ತೆ ಮೇಲೆ ನಿಂತಿರುವ ವಾಹನಗಳ ಕಾಟವೂ ಕಾಡುತ್ತದೆ.

ಅಧಿಕಾರಿಗಳು ಶೀಘ್ರ ಇತ್ತ ಗಮನ ಹರಿಸಿ ರಸ್ತೆಯನ್ನು ಕಸ ಮುಕ್ತಗೊಳಿಸಿ ಮಕ್ಕಳು ಹಾಗೂ ಜನಸಾಮಾನ್ಯರಿಗೂ ಓಡಾಡಲು ಅನುಕೂಲ ಮಾಡಿಕೊಡಬೇಕಾಗಿ ವಿನಂತಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.