ಹೊಸೆಕೆರೆಹಳ್ಳಿಯ ದತಾತ್ರೆಯನಗರದ 3ನೇ ಮುಖ್ಯ ರಸ್ತೆಯಲ್ಲಿ ನಮ್ಮ ಮನೆ ಇದೆ. ಅಕ್ಕಪಕ್ಕದ ರಸ್ತೆಯ ನಿವಾಸಿಗಳು 3ನೇ ಮುಖ್ಯರಸ್ತೆಗೆ ಬಂದು ತಮ್ಮ ಮನೆಯ ಕಸ ಸುರಿಯುತ್ತಾರೆ. ಇಷ್ಟು ಸಾಲದೆಂಬಂತೆ ಕಸ ಸಂಗ್ರಹಿಸುವವರೂ ಹಲವು ದಿನಗಳಿಗೊಮ್ಮೆ ಬಂದು ಕಸ ಸಂಗ್ರಹಿಸುತ್ತಾರೆ. ಇದರಿಂದ ಕಸ ಗಾಳಿಗೆ ಸಿಕ್ಕಿ ಮನೆಬಾಗಿಲಿಗೆ ಬಂದು ಬೀಳುತ್ತಿದೆ.
ಪಾಲಿಕೆ ಸಿಬ್ಬಂದಿ ಬಂದರೂ ಕೆಲವು ಮನೆಗಳಿಂದ ಮಾತ್ರ ಕಾಟಾಚಾರಕ್ಕೆ ತೆಗೆದುಕೊಂಡು ಹೋಗುತ್ತಾರೆ. ಕೆಲವೊಮ್ಮೆ ತಮ್ಮ ಗಾಡಿಯನ್ನು ರಸ್ತೆಯಲ್ಲಿಯೇ ಬಿಟ್ಟು ಹೋಗುತ್ತಾರೆ. ಯಾಕೆ ಹೀಗೆ ಎಂದು ವಿಚಾರಿಸಿದರೆ ಆಟೊ ಬರುತ್ತದೆ ಅವರು ತೆಗೆದುಕೊಂಡು ಹೋಗುತ್ತಾರೆ ಎಂದು ಹೇಳಿ ಜಾರಿಕೊಳ್ಳುತ್ತಾರೆ. ಸಿಬ್ಬಂದಿಯೂ ಪತ್ತೆಯಿಲ್ಲ, ಆಟೊದವರೂ ಪತ್ತೆ ಇರುವುದಿಲ್ಲ. ಕೆಲವರು ಕಸದ ಕವರ್‌ಅನ್ನು ರಸ್ತೆ ಮಧ್ಯೆ ಹಾಕಿ ಹೊಗುವುದನ್ನು ನಾವು ನೋಡಿದ್ದೇವೆ.
ಮಳೆಗಾಲವಾಗಿರುವುದರಿಂದ ಬಹುದಿನಗಳ ತ್ಯಾಜ್ಯ ಕೊಳೆತು ಸೊಳ್ಳೆಗಳಿಗೆ ಜನ್ಮ ಸ್ಥಾನವಾಗಿದೆ. ಕಚೇರಿಗೆ ಹೋಗಿ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಕಸದ ರಾಶಿ ದಿನದಿಂದ ದಿನಕ್ಕೆ ಜಾಸ್ತಿಯೇ ಆಗುತ್ತಿದೆ, ಹೊರತು ಕಡಿಮೆಯಾಗುತ್ತಿಲ್ಲ. ಇನ್ನಾದರೂ ಸಂಬಂಧಪಟ್ಟ ಪಾಲಿಕೆ ಸಿಬ್ಬಂದಿ ಇತ್ತ ಗಮನಹರಿಸಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.