ADVERTISEMENT

ಕುಂತು ತಿನ್ನುವವನಿಗೆ...

​ಪ್ರಜಾವಾಣಿ ವಾರ್ತೆ
Published 13 ಮೇ 2018, 19:30 IST
Last Updated 13 ಮೇ 2018, 19:30 IST

‘ಬದಲಾವಣೆ ಯಾವಾಗ?’– ಗಣೇಶಯ್ಯನವರ ಅನಿಸಿಕೆ ಅರ್ಥಗರ್ಭಿತವಾಗಿದೆ. ‘ಕುಂತು ತಿನ್ನುವವನಿಗೆ ಕುಡಿಕೆ ಹೊನ್ನು ಸಾಲದು’ ಎಂಬಂತೆ ನಮ್ಮ ಸರ್ಕಾರ ಕೊಡುತ್ತಿರುವ ಭಾಗ್ಯಗಳೇ ಇದಕ್ಕೆ ಸಾಕ್ಷಿ. ಹಿಂದೆ ಅಮೆರಿಕದ ಅಧ್ಯಕ್ಷರಾಗಿದ್ದ ಅಬ್ರಹಾಂ ಲಿಂಕನ್‌ ಅವರು ನುಡಿದ ಮುತ್ತಿನಂತ ಮಾತುಗಳು ನೆನಪಾಗುತ್ತವೆ.

ಪ್ರಸ್ತುತ ನಮಗೆ ಅವು ಅನ್ವಯಿಸುತ್ತವೆ. ಅವರ ಮಾತುಗಳೆಂದರೆ: ‘ಮಿತವ್ಯಯವನ್ನು ಪ್ರೋತ್ಸಾಹಿಸದೆ ಅಭಿವೃದ್ಧಿ ಸಾಧಿಸಲು ಆಗದು. ಪ್ರಬಲರನ್ನು ದುರ್ಬಲಗೊಳಿಸುವುದರಿಂದ, ದುರ್ಬಲರು ಪ್ರಬಲರಾಗುವುದಿಲ್ಲ. ಕೂಲಿ ಕೊಡುವವನನ್ನು ಕುಗ್ಗಿಸುವುದರಿಂದ ಕೂಲಿ ಮಾಡುವವನು ಉದ್ಧಾರವಾಗುವುದಿಲ್ಲ. ಧನಿಕನನ್ನು ನಾಶ ಮಾಡುವುದರಿಂದ ಬಡವನು ಉದ್ಧಾರವಾಗುವುದಿಲ್ಲ. ಸಂಪಾದಿಸುವುದಕ್ಕಿಂತ ಖರ್ಚು ಹೆಚ್ಚಾದರೆ ಕಷ್ಟ ತಪ್ಪಿದ್ದಲ್ಲ.

‘ಮನುಷ್ಯನ ಸ್ವಾತಂತ್ರ್ಯವನ್ನು ಅಪಹರಿಸಿದರೆ ಅವನಲ್ಲಿ ಶೀಲ, ಧೈರ್ಯ ತುಂಬಲು ಸಾಧ್ಯವಿಲ್ಲ. ಜನರು ತಮಗಾಗಿ ಮಾಡಿಕೊಳ್ಳಬೇಕಾದ್ದನ್ನು, ಸರ್ಕಾರ ಮಾಡುವುದರಿಂದ ಅವನಿಗೆ ಶಾಶ್ವತ ಸಹಾಯವಾಗುವುದಿಲ್ಲ. ಸಾಲ ಮಾಡಿ ದೇಶದಲ್ಲಿ ಸುಭದ್ರ ಸರ್ಕಾರ ಸ್ಥಾಪಿಸುವುದು ಸಾಧ್ಯವಿಲ್ಲ’.

ADVERTISEMENT

ಎಂ.ಬಿ. ರಂಗಪ್ಪಶೆಟ್ಟಿ ಮೋಕಾ, ಬಳ್ಳಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.