ADVERTISEMENT

ಕೆಂಪು ದೀಪ ನಿರ್ಬಂಧ ಸರಿ

ದಿನೇಶ್‌ ಕೆ.ಕಾರ್ಯಪ್ಪ
Published 15 ಡಿಸೆಂಬರ್ 2013, 19:30 IST
Last Updated 15 ಡಿಸೆಂಬರ್ 2013, 19:30 IST

ಸಂವಿಧಾನಾತ್ಮಕ ಹುದ್ದೆಗಳಲ್ಲಿ ಇರುವ ಗಣ್ಯರ ವಾಹನಗಳ ಮೇಲೆ ಮಾತ್ರ ಕೆಂಪು ದೀಪ ಇರಬೇಕು ಎಂದು ಸುಪ್ರೀಂಕೋರ್ಟ್ ನಿರ್ದೇಶಿ ಸಿರುವುದು ಸರಿಯಾಗಿದೆ. ಕೆಂಪು ದೀಪ ದುರ್ಬಳಕೆಗೆ ಕಡಿವಾಣ ಹಾಕುವಂತೆ ನ್ಯಾಯಾಲಯ ಸ್ಪಷ್ಟವಾಗಿ ಸೂಚಿಸಿರುವುದು  ಸ್ವಾಗತಾರ್ಹ.

ಗಣ್ಯರ ಭದ್ರತಾ ಸಿಬ್ಬಂದಿಯನ್ನು ವಾಪಸ್‌ ಪಡೆದು ರಸ್ತೆಗಳಲ್ಲಿ ಮಹಿಳೆಯರು ಸುರಕ್ಷಿತವಾಗಿ ಓಡಾಡುವಂಥ ವಾತಾವರಣ ಸೃಷ್ಟಿಸಲು ಅವರನ್ನು ಬಳಸಬೇಕು ಎಂಬ ಸುಪ್ರೀಂ­ಕೋರ್ಟ್ ಅಭಿಪ್ರಾಯವೂ ಸಮಂಜಸ ಆಗಿದೆ. ಇದರ ಜೊತೆಗೆ ಗಣ್ಯರ ಓಡಾಟಕ್ಕೆ ಅನುವು ಮಾಡುವುದಕ್ಕಾಗಿ, ಅವರು ಸಂಚರಿ ಸುವ ಮಾರ್ಗಗಳಲ್ಲಿ ಇತರ ವಾಹನ ಸಂಚಾರ ನಿರ್ಬಂಧಿಸುವ ಕ್ರಮಕ್ಕೂ ಕಡಿವಾಣ ಹಾಕಿ ಸಾರ್ವಜನಿಕರಿಗೆ ಕಿರಿಕಿರಿ ತಪ್ಪಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.