ಇಂದಿನ ದಿನಗಳಲ್ಲಿ ಕರ್ನಾಟಕ ಲೋಕಸೇವಾ ಆಯೋಗ ಸಾಕಷ್ಟು ನೇಮಕಾತಿ ಪ್ರಕ್ರಿಯೆ ಆರಂಭಿಸಿರುವುದು ಸ್ವಾಗತಾರ್ಹ ಹಾಗಂತ ನೇಮಕಾತಿ ಪದ್ಧತಿಯಲ್ಲಿ ಲೋಪದೋಷ ಇಲ್ಲವೇ ಇಲ್ಲವೆಂದಲ್ಲ! ಕೆಲವು ಹುದ್ದೆಗಳ ನೇಮಕಾತಿ ಸ್ವರೂಪವೇ ಅವೈಜ್ಞಾನಿಕತೆಯಿಂದ ಕೂಡಿದೆ.
ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ಈಗಾಗಲೇ ನೇಮಕಾತಿ ನಡೆದಿದೆ. ಇನ್ನೂ 1500 ಹುದ್ದೆಗಳನ್ನು ಭರ್ತಿ ಮಾಡಲು ಪ್ರಕ್ರಿಯೆ ಅರಂಭವಾಗಿದೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟವರಲ್ಲಿ ಕೆಲವೊಂದು ವಿಷಯಗಳನ್ನು ಗಮನಕ್ಕೆ ತರಬೇಕಾಗಿದೆ.
ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ಯು.ಜಿ.ಸಿ. ನಿಯಮಾನುಸಾರ ಆಯ್ಕೆ ಪ್ರಕ್ರಿಯೆ ನಡೆಯಬೇಕು. ಅದಕ್ಕೆ ಸಂಬಂಧಿಸಿದಂತೆ ಎನ್.ಇ.ಟಿ(ಸ್ಲೆಟ್), ಎಸ್.ಎಲ್.ಇ.ಟಿ (ಸ್ಲೆಟ್) ಅಥವಾ ಪಿಎಚ್‌ಡಿ ಪದವಿ ಕಡ್ಡಾಯವಾಗಿರುತ್ತದೆ. ಈ ಹಿಂದಿನ ನೇಮಕಾತಿಯಲ್ಲಿ ಸಾಕಷ್ಟು ಗೊಂದಲಗಳಿದ್ದವು. ಹೇಗೋ ಅವೈಜ್ಞಾನಿಕ ರೀತಿಯಲ್ಲಿ ಸರಿಯೆಂದು ಸಮಸ್ಯೆ ಬಿಗಡಾಯಿಸದಂತೆ ಬಿಸಿಯನ್ನು ತಣ್ಣಗಾಗಿಸಿದರು. ವಾಸ್ತವವಾಗಿ ವಿವಿಗಳಲ್ಲಿ ಸೆಮಿಸ್ಟರ್ ಪದ್ಧತಿ ಬರುವ ಮೊದಲು ಸರಾಸರಿ ಶೇ 65 ಪಡೆಯುವುದು ದೊಡ್ಡ ಸಾಧನೆ!
ಆ ಪ್ರಮಾಣದ ಅಂಕಗಳಿಗೆ ಮೊದಲ ಶ್ರೇಣಿಯ ಗೌರವವಿತ್ತು. ಇಂದು ಹಾಗಾಗುತ್ತಿಲ್ಲ ಸೆಮಿಸ್ಟರ್ ಪದ್ಧತಿಯಿಂದ ಶೇ 80 ಸಾಮಾನ್ಯ ಎನಿಸಿದೆ. ಅಲ್ಲದೆ ಮೈಸೂರು ವಿವಿ ಸಿಬಿಸಿಎಸ್ ಅಳವಡಿಸಿಕೊಂಡಿದೆ. ಆಂತರಿಕ ಮೌಲ್ಯಮಾಪನ ಇಲ್ಲೆಲ್ಲ ಸಹಾಯಕವಾಗಿದೆ.
ಈ ಎಲ್ಲ ಬೆಳವಣಿಗೆ ನಡೆದಿದೆ. ಆದರೆ ಶಿಕ್ಷಣದ ಹೊಸ ಪದ್ಧತಿ ಕೆಪಿಎಸ್ಸಿಗೆ ತಿಳಿದಿಲ್ಲವೇ? ಈಗಾಗಲೇ ನಾನ್ ಸೆಮಿಸ್ಟರ್ ವಿದ್ಯಾರ್ಥಿಗಳು ವಯೋಮಿತಿ ಮೀರಿದ್ದಾರೆ. ಅವರಾರಿಗೂ ಸಂದರ್ಶನಕ್ಕೆ ಅವಕಾಶವೇ ಇರುವುದಿಲ್ಲ! ಹಣದ ಪ್ರಮಾದ ಅಪಮೌಲ್ಯ ಆಗಿದೆ. ಉನ್ನತ ಶಿಕ್ಷಣ ಇಲಾಖೆ ಈ ಅವೈಜ್ಞಾನಿಕ ಪದ್ಧತಿ ನಡೆಸದಂತೆ ನಿಯಮಾವಳಿ ರೂಪಿಸಲಾಗುವುದಿಲ್ಲವೆ? ಪಾರದರ್ಶಕತೆಗೆ ಅವಕಾಶವಿಲ್ಲವೇ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.