ADVERTISEMENT

ಕೆಸರುಗದ್ದೆಯಾದ ರಸ್ತೆ

ಕುಂದು ಕೊರತೆ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2016, 19:30 IST
Last Updated 12 ಸೆಪ್ಟೆಂಬರ್ 2016, 19:30 IST
ಕೆಸರುಗದ್ದೆಯಾದ ರಸ್ತೆ
ಕೆಸರುಗದ್ದೆಯಾದ ರಸ್ತೆ   


ಬೆಂಗಳೂರು ಮಾಗಡಿ ರಸ್ತೆ ಮಾಚೋಹಳ್ಳಿ ತಿರುವಿನಿಂದ ಬಾಪಾ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹಾಳಾಗಿದ್ದು, ಕೆಸರು ಗದ್ದೆಯಂತಾಗಿದೆ.
ಸುಮಾರು 1 ಕಿ.ಮೀ. ಉದ್ದದ ಈ ರಸ್ತೆಯು ಹಿಂದೆ ಚೆನ್ನಾಗಿತ್ತು ಎಂಬುದನ್ನು ಊಹಿಸಲೂ ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ.

ರಸ್ತೆಯ ಅಕ್ಕ-ಪಕ್ಕದಲ್ಲಿ ಮೂರು ದೊಡ್ಡ ವಿದ್ಯಾಸಂಸ್ಥೆಗಳಿವೆ. ಅಕ್ಕ-ಪಕ್ಕದ ಬಡಾವಣೆಗಳ ಮನೆಗಳಲ್ಲಿ ನೂರಾರು ಮಂದಿ ಸಣ್ಣ ಕಾರ್ಖಾನೆಗಳನ್ನು ನಡೆಸುತ್ತಿದ್ದಾರೆ.

ಹೀಗಾಗಿ ಇಲ್ಲಿ ನಿರಂತರವಾಗಿ ವಾಹನಗಳ ಒಡಾಟ ಇರುತ್ತದೆ. ಮಳೆಗಾಲದಲ್ಲಂತೂ ಇಲ್ಲಿ ಸಂಚರಿಸುವವರ ಅವಸ್ಥೆ ಹೇಳತೀರದು. ಇದನ್ನು ಸರಿಪಡಿಸಲು ಯಾರೂ ಮುಂದೆ ಬರುತ್ತಿಲ್ಲ. ಅಧಿಕಾರಿಗಳು ಶೀಘ್ರ ಇತ್ತ ಗಮನ ಹರಿಸಿ, ರಸ್ತೆಗೆ ಡಾಂಬರು ಹಾಕಲು ಕ್ರಮ ಕೈಗೊಳ್ಳಬೇಕು.
-ನೊಂದ ಗ್ರಾಮಸ್ಥರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.