ADVERTISEMENT

ಕೊಟ್ಟ ಮಾತಿಗೆ ತಪ್ಪಬೇಡಿ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2012, 19:30 IST
Last Updated 8 ಅಕ್ಟೋಬರ್ 2012, 19:30 IST

ಸೆ. 13 ಮತ್ತು 14 ರಂದು ಸಾರಿಗೆ ನೌಕರರು ಮುಷ್ಕರ ನಡೆಸಿದ ಸಂದರ್ಭದಲ್ಲಿ `ಸಾರಿಗೆ ನೌಕರರ ವೇತನ, ಭತ್ಯೆಯನ್ನು ಹೆಚ್ಚಳ ಮಾಡಿದರೆ ಆ ಹೊರೆಯನ್ನು ರಾಜ್ಯದ ಪ್ರಯಾಣಿಕರ ಮೇಲೆ ಹಾಕಬೇಕಾಗುತ್ತದೆ;

ಡೀಸೆಲ್ ಬೆಲೆಯೂ ಹೆಚ್ಚಳವಾಗಿದೆ. ಇದೇ ಸಂದರ್ಭದಲ್ಲಿ ರಾಜ್ಯದ ಜನ ಬರದಿಂದ ತತ್ತರಿಸುತ್ತಿದ್ದಾರೆ. ಹೀಗಾಗಿ ಯಾವುದೇ ಕಾರಣಕ್ಕೂ ಬಸ್ ಟಿಕೆಟ್ ದರವನ್ನು ಹೆಚ್ಚಳ ಮಾಡುವುದಿಲ್ಲ~ ಎಂದು ರಾಜ್ಯದ ಜನತೆಗೆ ಸಾರಿಗೆ ಸಚಿವರು ಮಾತು ನೀಡಿದ್ದರು. 

ಆದರೆ ದಿನಾಂಕ 1-10-12ರ ಮಧ್ಯರಾತ್ರಿಯಿಂದ ಯಾವುದೇ ಮುನ್ಸೂಚನೆ ನೀಡದೆ ದರ ಹೆಚ್ಚಳ ಮಾಡಿ ಸಚಿವರು ಮಾತಿಗೆ ತಪ್ಪಿ ನಡೆದಿದ್ದಾರೆ. ಬಸ್ ಟಿಕೆಟ್ ದರವನ್ನು 20% ರಷ್ಟು ಹೆಚ್ಚಳ ಮಾಡಿದ್ದಾರೆ. ಈ ಬಸ್ ಟಿಕೆಟ್ ದರ ಏರಿಕೆ ನೆರೆಯ ರಾಜ್ಯಗಳಾದ ತಮಿಳುನಾಡು, ಆಂಧ್ರ, ಕೇರಳ, ಮಹಾರಾಷ್ಟ್ರ ರಾಜ್ಯಗಳಿಗೆ ಹೋಲಿಸಿದರೆ ಅತ್ಯಧಿಕವಾಗಿದೆ.

ಆದ್ದರಿಂದ ಕೂಡಲೇ ಸಾರಿಗೆ ಸಚಿವರು ಬಸ್ ಟಿಕೆಟ್ ದರವನ್ನು ವಾಪಸ್ಸು ಪಡೆದು ಸಾಮಾನ್ಯ ಜನರು ಬರದಲ್ಲಿ ಜೀವನ ನಡೆಸಲು ಅನುವು ಮಾಡಿಕೊಡಬೇಕಾಗಿ ಮನವಿ.

ADVERTISEMENT


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.