ADVERTISEMENT

ಕೊಳೆಗೇರಿಯಾಗಿರುವ ಕೆಂಗೇರಿ

ಆಶಾ ಹೆಗಡೆ
Published 7 ಮೇ 2012, 19:30 IST
Last Updated 7 ಮೇ 2012, 19:30 IST

ಇದು ಕೆಂಗೇರಿ ಉಪನಗರದ ಬೀದಿ ಬೀದಿಗಳಲ್ಲೂ ಕಂಡುಬರುವ ಸಾಮಾನ್ಯ ದೃಶ್ಯ! ಅದಕ್ಕೆ ಆಸ್ಪತ್ರೆ ಮಂದಿರ ಎಂಬ ಭೇದವಿಲ್ಲ. ಮೂಲೆಮೂಲೆಯಲ್ಲೂ ಕಸ ತುಂಬಿ ದುರ್ನಾತ ಹರಡುತ್ತದೆ.

ಈ ಬಗ್ಗೆ ನಗರ ಸಭಾ ಸದಸ್ಯರ ಗಮನಕ್ಕೆ ತಂದರೆ ಪಾಪ ಅವರು ಕೂಡಲೇ ಗಮನ ಹರಿಸುತ್ತಾರೆ. ತಕ್ಷಣ ಕಸದ ಗಾಡಿ ಬಂದು ಮನೆಗಳ ಮುಂದೆ ನಿಲ್ಲುತ್ತದೆ. ಬೀದಿ ಸ್ವಚ್ಛಗೊಳ್ಳುತ್ತದೆ.

ಆದರೆ ಇದು ಎರಡು ದಿನ ಮಾತ್ರ! ಮತ್ತೆ ಯಥಾ ಸ್ಥಿತಿ! ಪುನಃ ನಗರ ಸಭಾ ಸದಸ್ಯರಿಗೆ ಫೋನು! ಅವರಿಂದ ಭರವಸೆ. ಪ್ರತೀ ಬಾರಿ ನಾವು ಕರ್ತವ್ಯವನ್ನು ನೆನಪಿಸುವದಾದರೆ ಸಂಬಂಧಪಟ್ಟ ಅಧಿಕಾರಿಗಳ ಇಲಾಖೆಗಳ ಅವಶ್ಯಕತೆಯಾದರೂ ಏನು?
                                                                         
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.