ಅಸಹಾಯಕರಿಗೆ ನ್ಯಾಯ ದೊರಕಿಸಿಕೊಡಬೇಕಾದ ಸರ್ಕಾರ ಮತ್ತು ಅದರ ಪ್ರತಿನಿಧಿಗಳಾದ ಅಧಿಕಾರಿಗಳು ತಾವೇ ಶೋಷಣೆ ಮಾಡಲು ನಿಂತರೆ ಏನಾಗಬಹುದೋ, ಅದು ಬೆಂಗಳೂರು ಮಹಾನಗರ ಪಾಲಿಕೆಯ ಗುತ್ತಿಗೆ ಪೌರ ಕಾರ್ಮಿಕರ ವಿಷಯದಲ್ಲಿ ಆಗಿದೆ.
ತಾನೇ ನಿಗದಿಪಡಿಸಿದ, ಕನಿಷ್ಠ ಕೂಲಿಯನ್ನು ಅಧಿಕಾರಿಗಳು ಕೊಡದೆ ವಂಚಿಸುತ್ತಿದ್ದರೆ, ಅದನ್ನು ನೋಡುತ್ತಾ ಕುಳಿತ ಸರ್ಕಾರ ತಾನೂ ವಂಚಕನಾಗುತ್ತದೆ. ನಾಗರಿಕರೆನಿಸಿಕೊಂಡವರ ಕಸ-ಕೊಳೆಗಳನ್ನು ಸ್ವಚ್ಛ ಮಾಡುವ ಪೌರ ಕಾರ್ಮಿಕರಿಗೆ ಕನಿಷ್ಠ ಕೂಲಿ ನಿಗದಿಯಾದ 2010ರ ಸೆಪ್ಟೆಂಬರ್ ತಿಂಗಳಿನಿಂದಲೇ ಬಡ್ಡಿ ಸಮೇತ ಸಂಬಳ ಕೊಡಬೇಕು.
ಕನಿಷ್ಠ ಕೂಲಿ ಕೊಡದೆ ವಂಚಿಸಿದ ಬೆಂಗಳೂರು ಮಹಾನಗರ ಪಾಲಿಕೆಯ ಕಮಿಷನರ್, ಮೇಯರ್ ಮತ್ತು ಗುತ್ತಿಗೆದಾರರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಬೇಕು. ಈವರೆಗೂ ಆಗಿರುವ ಅನ್ಯಾಯಕ್ಕೆ ಪೌರ ಕಾರ್ಮಿಕರ ಕ್ಷಮೆ ಕೋರಿ, ಬೆಂಗಳೂರು ಮಹಾನಗರ ಪಾಲಿಕೆಯ ಕಮಿಷನರ್, ಮೇಯರ್ ಮತ್ತು ಅಧಿಕಾರಿಗಳಿಂದ ಒಂದು ದಿನ ಪೌರ ಕಾರ್ಮಿಕರ ಕೆಲಸ ಮಾಡಿಸಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.