‘ವಿಶ್ವವಿದ್ಯಾಲಯಗಳಲ್ಲೂ ಭ್ರಷ್ಟಾಚಾರ, ಜಾತಿ ರಾಜಕೀಯ ಹೆಚ್ಚಾಗಿದೆ. ಬೌದ್ಧಿಕ ವೇಶ್ಯೆಯರು, ತಲೆಹಿಡುಕರು ಕುಲಪತಿಗಳ ಹುದ್ದೆಗೆ ಅರ್ಹರಾಗುತ್ತಿದ್ದಾರೆ’ ಎಂದು ಕಿಡಿ ಕಾರಿರುವ ಮೈಸೂರು ವಿಶ್ವವಿದ್ಯಾಲಯ ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕ ಮಹೇಶ್‌ಚಂದ್ರ ಗುರು, ‘ಕುಲಪತಿ ಹುದ್ದೆ ನನ್ನ ಚಪ್ಪಲಿಗೆ ಸಮ’ ಎಂದಿದ್ದಾರೆ (ಪ್ರ.ವಾ., ಜ. 28).
ವಿಶ್ವವಿದ್ಯಾಲಯಗಳನ್ನು ದಿವಾಳಿ ಎಬ್ಬಿಸಿ, ಅಯೋಗ್ಯರ ಕೇಂದ್ರಗಳನ್ನಾಗಿ ಪರಿವರ್ತಿಸಿದ ಕುಲಪತಿಗಳ ಘನಂದಾರಿ ಕೆಲಸದ ಬಗ್ಗೆ ಆಕ್ರೋಶದಿಂದ ಮಾತನಾಡಿರುವ ಗುರು ಅವರ ವೇದನೆ ಅರ್ಥವಾಗುತ್ತದೆ. ಆದರೆ, ಇಂತಹ ಅಯೋಗ್ಯ ಕೆಲಸಕ್ಕೆ ಬಳಕೆಯಾಗುತ್ತಿರುವ ಕುಲಪತಿ ಹುದ್ದೆ ಯನ್ನು ಚಪ್ಪಲಿಗೆ ಹೋಲಿಕೆ ಮಾಡಿರುವುದು ಎಷ್ಟರಮಟ್ಟಿಗೆ ಸೂಕ್ತ?
ಏಕೆಂದರೆ, ತನ್ನನ್ನು ಧರಿಸಿದಾತನ ಇಡೀ ಶರೀರವನ್ನು ಪಾದದ ಮೂಲಕ ನಿಷ್ಠೆಯಿಂದ ಸಂರಕ್ಷಿಸುತ್ತದೆ ಚಪ್ಪಲಿ. ಆ ಮೂಲಕ ಆತನ ವ್ಯಕ್ತಿತ್ವಕ್ಕೊಂದು ಮೆರುಗೂ ನೀಡುತ್ತದೆ. ಇಂಥ ನಿಷ್ಠೆ, ಅಯೋಗ್ಯ ಕುಲಪತಿಗಿಲ್ಲದಿರುವಾಗ ಚಪ್ಪಲಿಗೆ ಹೋಲಿಕೆ ಮಾಡಿ, ಅದಕ್ಕೇಕೆ ಅವಮಾನ ಮಾಡುತ್ತೀರಿ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.