ADVERTISEMENT

ಚಲಾವಣೆಗೆ ಬರಲಿ

ಡಾ.ಲೀಲಾವತಿ ದೇವದಾಸ್‌
Published 4 ಫೆಬ್ರುವರಿ 2015, 19:30 IST
Last Updated 4 ಫೆಬ್ರುವರಿ 2015, 19:30 IST

ಈ ದಿನಗಳಲ್ಲಿ ನಮ್ಮ ವರಕವಿ ದ.ರಾ. ಬೇಂದ್ರೆಯವರ ಜನ್ಮದಿನವನ್ನು ಸಂಭ್ರಮ­ದಿಂದ ಆಚರಿಸುತ್ತಿದ್ದೇವೆ. ಸಂತೋಷ. ಆದರೆ, ಆ ಬೇಂದ್ರೆಯವರ ಹೆಸರನ್ನಿಟ್ಟಿ­ರುವ ಹಾಗೂ ಬೆಂಗಳೂರಿನ  ವಿಜಯ­ನಗರ– ಯಶವಂತಪುರಗಳನ್ನು ಸೇರಿ­ಸುವ ಪ್ರತಿಷ್ಠಿತ ರಸ್ತೆಯನ್ನು ಇನ್ನೂ ‘ಕಾರ್ಡ್‌ ರೋಡ್‌’ ಎಂದೇ ಕರೆಯುತ್ತಿ­ದ್ದೇವೆ! ಆ  ರಸ್ತೆಯ  ಇಕ್ಕೆಲಗಳಲ್ಲಿ ಎದ್ದಿರುವ ಮಳಿಗೆ ಇತ್ಯಾದಿಗಳ ಫಲಕಗಳ ಮೇಲೆಯೂ ‘ಕಾರ್ಡ್‌ ರೋಡ್‌’ ಹೆಸರೇ ರಾರಾಜಿಸುತ್ತಿದೆ! ಈ ವಿಪರ್‍ಯಾಸವನ್ನು  ಬೇಂದ್ರೆಯವರ ಕಟ್ಟಾ ಅಭಿಮಾನಿಗಳು ಸವಾಲಾಗಿ ಸ್ವೀಕರಿಸಿ ಆ ತಪ್ಪನ್ನು ಸರಿಪಡಿಸುವರೆ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.